
ಕಡಬ: ಧರ್ಮಸ್ಥಳ ಯೋಜನೆಯಿಂದ 30,000 ರೂ. ಸಹಾಯಧನ ವಿತರಣೆ
ಕಡಬ ತಾಲೂಕು ಬಿಳಿನೆಲೆ ವಲಯದ ಐತ್ತೂರು ಒಕ್ಕೂಟದ ಅಧ್ಯಕ್ಷ ಕುಲಶೇಖರ ರವರಿಗೆ ತೀವ್ರ ಅನಾರೋಗ್ಯದಿಂದ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ಹಿನ್ನೆಲೆಯಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು 30,000 ರೂ. ಸಹಾಯಧನ ಮಂಜೂರು ಮಾಡಿದ್ದಾರೆ.
ಈ ಮೊತ್ತದ ಮಂಜೂರಾತಿ ಪತ್ರವನ್ನು ಕುಲಶೇಖರ ರವರ ಸ್ವಗೃಹದಲ್ಲಿ ತಾಲೂಕು ಧಾರ್ಮಿಕ ಕ್ಷೇತ್ರ ಸಂರಕ್ಷಣಾ ಸಮಿತಿಯ ಸಂಚಾಲಕರಾದ ರಮೇಶ್ ಕಲ್ಪುರೆಯವರು ಹಸ್ತಾಂತರಿಸಿ ಸಾಂತ್ವನ ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಜನಜಾಗೃತಿ ಸದಸ್ಯ ಗಣೇಶ್ ಮುಜೂರು, ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ, ಸೇವಾ ಪ್ರತಿನಿಧಿಗಳಾದ ನೇತ್ರ, ವಿನೋದ್, ಗಣೇಶ್, ಬೇಬಿ ಜ್ಞಾನಸೇಲ್ವೀ ಹಾಗೂ ಕುಲಶೇಖರ ರವರ ಮನೆಯವರು ಉಪಸ್ಥಿತರಿದ್ದರು.

