ಪುತ್ತೂರಿನ ಕಾವು ಸಮೀಪದ ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯಲ್ಲಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ದಿ. 05 ರಿಂದ ಭವ್ಯ ಚಾಲನೆ ದೊರೆತಿದ್ದು, ಸಂಸ್ಥೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹಬ್ಬದ ಸಂಭ್ರಮ ನೆಲೆಸಿದೆ. ಸುಮಾರು 360ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಈ ಸಂಸ್ಥೆಯಲ್ಲಿ ಅರಬಿ, ಇಂಗ್ಲೀಷ್, ಉರ್ದು, ಕನ್ನಡ, ಮಲಯಾಳಂ ಸೇರಿದಂತೆ ಅಂತರಾಷ್ಟ್ರೀಯ ಭಾಷೆಗಳ ಪಠ್ಯ–ಪಠ್ಯೇತರ ಚಟುವಟಿಕೆಗಳು ಸಕ್ರಿಯವಾಗಿ ನಡೆಯುತ್ತಿವೆ.
ಸಂಸ್ಥೆಯು ಆಧುನಿಕ ತಂತ್ರಜ್ಞಾನದ ಸೌಲಭ್ಯಗಳೊಂದಿಗೆ ಮುನ್ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ಸೆಂಟರ್, ಲೈಬ್ರರಿ ಸೇರಿದಂತೆ ಅತ್ಯಾಧುನಿಕ ಮಟ್ಟದ ಶಿಕ್ಷಣ ವ್ಯವಸ್ಥೆ ಹೊಂದಿದೆ. ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ತಾವೇ ತಯಾರಿಸಿದ ಹಲವು ವಿಜ್ಞಾನ ಕಲಾಪ್ರದರ್ಶನಗಳನ್ನು ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿದೆ.


ಡಿ. 7ರವರೆಗೆ ನಡೆಯಲಿರುವ ಈ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸುಮಾರು 35 ವಿದ್ಯಾರ್ಥಿಗಳಿಗೆ ಹುದವಿ ಬಿರುದು ಪ್ರದಾನ ಮಾಡುವ ವಿಶೇಷ ಕಾರ್ಯಕ್ರಮವೂ ಜರುಗಲಿದೆ.

ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಮಾಧ್ಯಮದೊಂದಿಗೆ ಮಾತನಾಡಿ, “ಶತಮಾನೋತ್ಸವಕ್ಕಾಗಿ ಸುಮಾರು 10 ಸಾವಿರ ಮನೆಗಳಿಗೆ ನೇರವಾಗಿ ತೆರಳಿ ಆಹ್ವಾನ ನೀಡಲಾಗಿದೆ. ಗಣ್ಯಾತಿ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಸ್ಥೆಗೆ ತನ್ನದೇ ಆದ ಇತಿಹಾಸವಿದ್ದು, ಅದನ್ನು ಮುಂದುವರಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ” ಎಂದು ಹೇಳಿದರು.

ಸಂಸ್ಥೆಯ ಮ್ಯಾನೇಜರ್ ಖಲೀಲು ರಹ್ಮಾನ್ ಅರ್ಶಾದಿ ಮಾತನಾಡಿ, “2019ರಲ್ಲಿ ಗ್ರಾಮೀಣ ಪರಿಸರದಲ್ಲಿ ಆರಂಭವಾದ ಈ ಸಂಸ್ಥೆ ಇಂದು ಶತಮಾನೋತ್ಸವದ ಘಟ್ಟ ತಲುಪಿದೆ. ವಿದ್ಯಾರ್ಥಿಗಳ ಉತ್ತೇಜನಕ್ಕಾಗಿ ಅಧ್ಯಯನ ಶಿಬಿರ, ವಿದ್ಯಾರ್ಥಿ ಶಿಬಿರ, ಸೆಮಿನಾರ್‌ಗಳನ್ನು ಆಯೋಜಿಸಲಾಗಿದೆ. ಅನಿವಾಸಿ ಉದ್ಯಮಿಗಳೂ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ವಿದ್ಯಾರ್ಥಿಗಳು ಅವರೊಂದಿಗೆ ಸಂವಾದ ನಡೆಸುವ ಅವಕಾಶ ಪಡೆಯಲಿದ್ದಾರೆ” ಎಂದು ತಿಳಿಸಿದರು.




ಬೈಟ್‌ಗಳು:
ಬೈಟ್ 01: ಬುಶ್ರಾ ಅಬ್ದುಲ್ ಅಝೀಝ್ – ಅಧ್ಯಕ್ಷರು, ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ
ಬೈಟ್ 02: ಖಲೀಲು ರಹ್ಮಾನ್ ಅರ್ಶಾದಿ – ಮ್ಯಾನೇಜರ್, ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ



