LPC (Long Pending Case) ಅಂದರೆ ಆರೋಪಿ ದೀರ್ಘಕಾಲ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುವುದರಿಂದ ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣ.
ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಎನ್‌ಡಿಪಿಎಸ್ ಕಾಯ್ದೆಯ ಪ್ರಕರಣವೊಂದರಲ್ಲಿ ಕಳೆದ 14 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಈ ದಿನ ಪತ್ತೆಹಚ್ಚಿ ದಸ್ತಗಿರಿ ಮಾಡಿದ್ದಾರೆ.





ದಸ್ತಗಿರಿಯಾಗಿರುವ ಆರೋಪಿಯನ್ನು ಮೊಹಮ್ಮದ್ ಸಂಶೀರ್ (ತಂದೆ: ಮೊಹಮ್ಮದ್ ಇಸ್ಮಾಯಿಲ್), ವಾಸ: ಶಾಜ್ಮೀನ್ ಅಪಾರ್ಟ್‌ಮೆಂಟ್, ರೂಂ ನಂ. 07, ತೋಯಿಬ್ ಮಸೀದಿ ಎದುರುಗಡೆ, ಮುಕ್ಕಚೇರಿ, ಉಳ್ಳಾಲ, ಮಂಗಳೂರು ಎಂದು ಗುರುತಿಸಲಾಗಿದೆ.
ಉಳ್ಳಾಲ ಪೊಲೀಸ್ ಠಾಣೆ ಮೊ.ನಂ. 312/2011, ಕಲಂ 8(c)(ii) ಓದುಗೊಡನೆ 20(b) ಎನ್‌ಡಿಪಿಎಸ್ ಕಾಯ್ದೆ ಹಾಗೂ ಮಾನ್ಯ ಜೆಎಂಎಫ್‌ಸಿ–II ನ್ಯಾಯಾಲಯದ ಸಿ.ಸಿ. ನಂ. 1757/2013 ಪ್ರಕರಣದಲ್ಲಿ ಆರೋಪಿಯ ವಿರುದ್ಧ ಮಾನ್ಯ ನ್ಯಾಯಾಲಯವು LPC (Long Pending Case) ವಾರಂಟ್ ಹೊರಡಿಸಿರುತ್ತದೆ. ಅದರಂತೆ ಆರೋಪಿಯನ್ನು ದಸ್ತಗಿರಿ ಮಾಡಿ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗಿದೆ.




