ಪುತ್ತೂರು: ಸಮಾಜದ ಚಲನವಲನ ನಿರಂತರವಾಗಿರಲು ಪ್ರಮುಖ ಪಾತ್ರವಹಿಸುವ ನಮ್ಮ ಹೆಮ್ಮೆಯ ಚಾಲಕರಿಗಾಗಿ ಹೋಂಡಾ ದ್ವಿಚಕ್ರ ವಾಹನಗಳ ಮೇಲೆ ವಿಶೇಷ ಆಫರ್ ಘೋಷಿಸಲಾಗಿದೆ. ‘ಸಾರಥಿಗಳ ಬದುಕಿನ ’ಆಸರೆಯ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದ್ವಿಚಕ್ರ ವಾಹನ ಕ್ಷೇತ್ರದ ವಿಶ್ವಾಸಾರ್ಹ ಸಂಸ್ಥೆ ‘ತಿರುಮಲ ಹೋಂಡಾ’ ಈ ವಿಶೇಷ ಸೌಲಭ್ಯವನ್ನು ಪರಿಚಯಿಸಿದೆ.

ಬ್ಯಾಡ್ಜ್ ಹೊಂದಿರುವ ಚಾಲಕರಿಗೆ ಮಾತ್ರ ಈ ವಿಶೇಷ ಯೋಜನೆ ಅನ್ವಯವಾಗುತ್ತದೆ. ‘ಸಾರಥಿ ಸ್ಪೆಷಲ್ ಸ್ಕೀಮ್’ ಮೂಲಕ ಹೋಂಡಾ ದ್ವಿಚಕ್ರ ವಾಹನಗಳ ಖರೀದಿಯಲ್ಲಿ ಆಕರ್ಷಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಚಾಲಕರಿಗೆ ಸುಲಭವಾಗಿ ಹೊಸ ವಾಹನ ಹೊಂದುವ ಅವಕಾಶ ಕಲ್ಪಿಸಲಾಗಿದೆ.
ಸಾರಥಿಗಳಿಗೆ ವಿಶೇಷ ಗೌರವ – ₹2,500 ನೇರ ರಿಯಾಯಿತಿ:
ತಮ್ಮ ಬ್ಯಾಡ್ಜ್ ಮೂಲಕ ವಾಹನ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಚಾಲಕರು ಯಾವುದೇ ಹೋಂಡಾ ದ್ವಿಚಕ್ರ ವಾಹನ ಖರೀದಿಸಿದರೆ ಅವರಿಗೆ ನೇರವಾಗಿ ₹2,500 ರಷ್ಟು ಫ್ಲಾಟ್ ಡಿಸ್ಕೌಂಟ್ ನೀಡಲಾಗುತ್ತದೆ. ಈ ಯೋಜನೆ ಸೀಮಿತ ಅವಧಿಗೆ ಮಾತ್ರ ಲಭ್ಯವಿದ್ದು, ಆಸಕ್ತ ಚಾಲಕರು ಸಮೀಪದ ‘ತಿರುಮಲ ಹೋಂಡಾ’ ವಿತರಕರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಎಂದು ಸಂಸ್ಥೆ ತಿಳಿಸಿದೆ.

ಚಾಲಕರ ಶ್ರಮವನ್ನು ಗೌರವಿಸುವ ಉದ್ದೇಶದಿಂದ ರೂಪಿಸಿರುವ ಈ ವಿಶೇಷ ಆಫರ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *