ಬೆಂಗಳೂರು: ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಕಳುಹಿಸಿರುವ ಸುತ್ತೋಲೆಯ ಆದೇಶದಂತೆ, ಮಾರ್ಚ್ 15ರಿಂದ 20ರವರೆಗೆ ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ 26ನೇ ಯೂತ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್‌ಶಿಪ್ (ಪುರುಷ ಮತ್ತು ಮಹಿಳಾ) ಸ್ಪರ್ಧೆಗೆ ಕರ್ನಾಟಕ ರಾಜ್ಯ ಮಹಿಳಾ ಯೂತ್ ವಾಲಿಬಾಲ್ ತಂಡದ ಆಯ್ಕೆ ಪ್ರಕ್ರಿಯೆ ಫೆಬ್ರವರಿ 13, 2026ರಂದು ನಡೆಯಲಿದೆ.
ಆಯ್ಕೆ ಪ್ರಕ್ರಿಯೆ ಬೆಂಗಳೂರು ಜಯನಗರ 3ನೇ ಬ್ಲಾಕ್‌ನ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಬೆಳಗ್ಗೆ 9.30ಕ್ಕೆ ನಡೆಯಲಿದ್ದು, ಕರ್ನಾಟಕ ರಾಜ್ಯದ ವಾಲಿಬಾಲ್ ಆಟಗಾರ್ತಿಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಹರ್ಷ ಆರ್
ಅಧ್ಯಕ್ಷರು
ಕರ್ನಾಟಕ ವಾಲಿಬಾಲ್ ಎಸೋಸಿಯೇಷನ್

ಆಂತೋನಿ ಜೋಸೆಫ್
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್

ಸಾಲ್ಮರ ಶರೀಫ್
ಕಾರ್ಯಕಾರಿ ಸದಸ್ಯ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್

ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು 01-01-2005 ರಂದು ಅಥವಾ ನಂತರ ಜನಿಸಿದ ಆಟಗಾರ್ತಿಯರು ಅರ್ಹರಾಗಿದ್ದಾರೆ. ಭಾಗವಹಿಸುವವರು ಭಾರತ ಸರ್ಕಾರದಿಂದ ಅನುಮೋದಿತ ಆಸ್ಪತ್ರೆಯಿಂದ ನೀಡಲಾದ ವೈದ್ಯಕೀಯ ಪ್ರಮಾಣಪತ್ರ (ಇತ್ತೀಚಿನ ಸುತ್ತೋಲೆಯ ಪ್ರಕಾರ), ಪುರಸಭೆ/ನಿಗಮ/ಶೈಕ್ಷಣಿಕ ಸಂಸ್ಥೆ/ಆಧಾರ್ ಕಾರ್ಡ್ ನೀಡಿದ ಜನನ ಪ್ರಮಾಣಪತ್ರ ಹಾಗೂ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯನ್ನು ಕಡ್ಡಾಯವಾಗಿ ತರಬೇಕು.
ಆಟಗಾರ್ತಿಯರು ನಿಗದಿತ ಸಮಯಕ್ಕೆ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಹರ್ಷ ಆರ್. ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಎಲ್.ಪಿ. ಆಂಟನಿ ಜೋಸೆಫ್ ಅವರಿಗೆ ವರದಿ ಮಾಡಬೇಕು ಎಂದು ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸಾಲ್ಮರ ಶರೀಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









