ಪುತ್ತೂರು:
ಬುಸ್ತಾನುಲ್ ಬಾದುಷಾ ಮಜ್ಲಿಸ್ ಕೆಮ್ಮಾಯಿ ಹಾಗೂ ಜಲಾಲಿಯ್ಯ ರಾತೀಬ್ ಸಮಿತಿ ಕೆಮ್ಮಾಯಿ ಇವರ ಜಂಟಿ ಆಶ್ರಯದಲ್ಲಿ 4ನೇ ವರ್ಷದ ಜಲಾಲಿಯ್ಯ ರಾತೀಬ್ ವಾರ್ಷಿಕೋತ್ಸವ ಜ.11ರಂದು ಕೆಮ್ಮಾಯಿ ತಂಙಳ್ ನಿವಾಸದಲ್ಲಿ ನಡೆಯಲಿದೆ ಎಂದು ಜಲಾಲಿಯ್ಯ ರಾತೀಬ್ ಸಮಿತಿ ಸಂಚಾಲಕ ಇಸಾಕ್ ಸಾಲ್ಮರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಂಜೆ 4 ಗಂಟೆಗೆ ಸಯ್ಯಿದ್‌ಮಲೆ ಮಖಾಂ ಝಿಯಾರತ್ ನಡೆಯಲಿದ್ದು, ಸಂಜೆ 5 ಗಂಟೆಗೆ ಅಜ್ಮೀರ್ ಮೌಲಿದ್ ಕಾರ್ಯಕ್ರಮ ಜರುಗಲಿದೆ. ಮಗ್ರಿಬ್ ನಮಾಝಿನ ಬಳಿಕ ನಡೆಯುವ ಸಭಾ ಕಾರ್ಯಕ್ರಮಕ್ಕೆ ಹಾಜಿ ಸಯ್ಯಿದ್ ಅಬೂಬಕ್ಕರ್ ಅಲ್ ಹಾದಿ ತಂಙಳ್ ಕೆಮ್ಮಾಯಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ದಿನ ಅಲ್ ಹಾಜಿ ಸಯ್ಯಿದ್ ಅಹ್ಮದ್ ಪೂಕೋಯ ತಙಳ್ ಅವರು ದುವಾ ನೆರವೇರಿಸಲಿದ್ದಾರೆ.
ಕಾರ್ಯಕ್ರಮವನ್ನು ಸಾಲ್ಮರ ಸಯ್ಯಿದ್‌ಮಲೆ ಖತೀಬರಾದ ಅಲ್ ಹಾಜ್ ಉಮರ್ ದಾರಿಮಿ ಸಾಲ್ಮರ ಅವರು ಉದ್ಘಾಟಿಸಲಿದ್ದು, ಕೆಮ್ಮಾಯಿ ಮುದರ್ರಿಸ್ ಮುಈನುದ್ದೀನ್ ಮದನಿ ಅಲ್ ಹುಮೈದಿ ಪುಣಚ ಅವರು ಅಸಂಶ ಭಾಷಣ ಮಾಡಲಿದ್ದಾರೆ. ಈ ಸಂದರ್ಭ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇಶಾ ನಮಾಝಿನ ನಂತರ ಜಲಾಲಿಯ್ಯ ರಾತೀಬ್ ಮಜ್ಲಿಸ್ ಕಾರ್ಯಕ್ರಮವು ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಲ್ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಇಸಾಕ್ ಸಾಲ್ಮರ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಸ್ತಾನುಲ್ ಬಾದುಷಾ ಕೆಮ್ಮಾಯಿ ಸಮಿತಿ ಸಂಚಾಲಕ ಅದ್ದು ಕೆಮ್ಮಾಯಿ, ಅಧ್ಯಕ್ಷ ಯೂಸುಫ್ ತಾರಿಗುಡ್ಡೆ, ಕಾರ್ಯದರ್ಶಿ ಅಬ್ದುಲ್ ರಶೀದ್ ಕೆಮ್ಮಾಯಿ ಹಾಗೂ ಖಜಾಂಜಿ ನೌಫಲ್ ಕೆಮ್ಮಾಯಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *