ಪುತ್ತೂರು: ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಕಾಪಿಕಾಡ್ ಪರಿಸರದ ಐವರು ಬಿಜೆಪಿ ಸಕ್ರೀಯ ಯುವ ಕಾರ್ಯಕರ್ತರು ಶಾಸಕ ಅಶೋಕ್ ರೈ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.


ಉಮೇಶ್ ರೈ ಕಾಪಿಕಾಡು,ಕೀರ್ತನ್,ಸೋಮಾವತಿ ಕಾಪಿಕಾಡು,ಮಮತಾ ಕಾಪಿಕಾಡು ಮತ್ತು ಪ್ರವೀಣ್ ಕುಲಾಲ್ ಅಜ್ಜಿಕಲ್ಲು ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಗೊಂಡವರು.

ಬೂತ್ ಅಧ್ಯಕ್ಷರಾದ ಮನೋಜ್ ಗೌಡ ಹಾಗೂ ಗ್ಯಾರಂಟಿ‌ಸಮಿತಿ ಸದಸ್ಯ ಸಂತೋಷ್ ಭಂಡಾರಿ ಚಿಲ್ಮೆತ್ತಾರು ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ಪಕ್ಷದ ದ್ವಜ ನೀಡಿ ಶಾಸಕರು ಪಕ್ಷಕ್ಕೆ ಬರಮಾಡಿಕೊಂಡರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುವುದಾಗಿ ಸೇರ್ಪಡೆಗೊಂಡವರು ಭರವಸೆ ನೀಡಿದರು.

Leave a Reply

Your email address will not be published. Required fields are marked *