ಕಡಬ: ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಮಾತೃಶಕ್ತಿ ಮತ್ತು ದುರ್ಗ ವಾಹಿನಿ ಕಡಬ ಪ್ರಖಂಡ ಇದರ ವತಿಯಿಂದ ನವೆಂಬರ್ 25, ಮಂಗಳವಾರ, ಪಂಚಮಿಯ ದಿನದಂದು ಹಸಿರು ಹೊರ ಕಾಣಿಕೆ ಸಮರ್ಪಣೆ ಹಾಗೂ ಧರ್ಮ ಜಾಗೃತಿಗಾಗಿ ಎಂಟನೇ ವರ್ಷದ ಪಾದಯಾತ್ರೆ ನಡೆಯಲಿದೆ.
ಪಾದಯಾತ್ರೆ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಿಂದ ಬೆಳಗ್ಗೆ 5:30ಕ್ಕೆ ಆರಂಭವಾಗಲಿದ್ದು, “ನಮ್ಮ ನಡೆ ಕುಕ್ಕೆ ಸುಬ್ರಹ್ಮಣ್ಯ ನಡೆಗೆ “ಶ್ರೀ ಪ್ರಸಾದ್ ಕೆದಿಲಾಯ (ಪುರೋಹಿತರು, ಕಡಬ) ಉದ್ಘಾಟನೆ ನೆರವೇರಿಸಲಿದ್ದಾರೆ.




ಪಾದಯಾತ್ರೆಯ ಸಮಾರೋಪ ಹಾಗೂ ಧರ್ಮ ಜಾಗೃತಿ ಸಭೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಜರುಗಲಿದೆ.
ಕಾರ್ಯಕ್ರಮದಲ್ಲಿ ವಿವಿಧ ಘಟಕಗಳ ಸ್ವಯಂಸೇವಕರು, ಭಕ್ತರು ಮತ್ತು ಸ್ಥಳೀಯರು ಭಾಗವಹಿಸುವ ನಿರೀಕ್ಷೆಯಿದ್ದು, ಧಾರ್ಮಿಕ ಜಾಗೃತಿ ಮತ್ತು ಸಮಾಜಸೇವೆಯ ಸಂದೇಶ ಈ ಸಂದರ್ಭದಲ್ಲಿ ಹರಿಯಲಿದೆ.




