ಪುತ್ತೂರು: ಇಂಪ್ಯಾಕ್ಟ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ವತಿಯಿಂದ ಸುಳ್ಯದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕೆ.ಪಿ. ಲಹರಿ ರೈ ಅವರು ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಲಹರಿ ರೈ ಅವರು ಕಟಾ ಮತ್ತು ಕುಮಿಟೆ ಎಂಬ ಎರಡು ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಎರಡು ಚಿನ್ನದ ಪದಕಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ.

ಇವರಿಗೆ ಕರಾಟೆ ಶಿಕ್ಷಕರಾದ ನಾರಾಯಣ ಆಚಾರ್ಯ ಮಳಿ ಅವರು ತರಬೇತಿ ನೀಡಿದ್ದರು. ಲಹರಿ ರೈ ಅವರು ಈಶ್ವರ ಮಂಗಳದ ಕುತ್ಯಾಳಪಾದೆಯ ಶ್ರೀ ಪ್ರಸಾದ್ ಮತ್ತು ಉಷಾ ಅವರ ಪುತ್ರಿ.

ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಲಹರಿ ರೈ ಅವರಿಗೆ ಸ್ಥಳೀಯರಿಂದ ಅಭಿನಂದನೆಗಳ ಸುರಿಮಳೆ ಹರಿದು ಬರುತ್ತಿದೆ…

Leave a Reply

Your email address will not be published. Required fields are marked *