ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 78ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ನವೆಂಬರ್ 25ರಂದು ಅಮೃತವರ್ಷಿಣಿ ಸಭಾಂಗಣದಲ್ಲಿ ವಿಶೇಷ ಗೌರವ ಸಮರ್ಪಣೆ ಹಾಗೂ ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಮಾ ಸೇವಾ ವಿಭಾಗದಿಂದ ಹೆಗ್ಗಡೆಯವರ ಅನನ್ಯ ಸಾಮಾಜಿಕ ಸೇವೆ ಮತ್ತು ಬಹುಮುಖ ಸಾಧನೆಗಳನ್ನು ಗುರುತಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಂಚೆ ಇಲಾಖೆ ಹೊರತಂದ, ಡಾ. ಹೆಗ್ಗಡೆಯವರ ಭಾವಚಿತ್ರ ಹೊಂದಿದ ವಿಶೇಷ ಅಂಚೆ ಚೀಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹೆಗ್ಗಡೆಯವರ ಜೀವನ, ಸಾಧನೆ ಮತ್ತು ಸಮಾಜಮುಖಿ ಕೊಡುಗೆಗಳ ಕುರಿತು ವೀಡಿಯೋ ಪ್ರದರ್ಶನ ನಡೆಯಿತು. ಡಾ. ಎಪಿಜೆ ಅಬ್ದುಲ್ ಕಲಾಂ ಇಂಟರ್ನ್ಯಾಷನಲ್ ಫೌಂಡೇಶನ್ ವತಿಯಿಂದ ಡಾ. ಹೆಗ್ಗಡೆಯವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.

ನಿನಾದ ಶಾಸ್ತ್ರಿಯ, ಧರ್ಮಸ್ಥಳ ಮಕ್ಕಳಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿದ್ದು, ಎಸ್‌ಡಿಎಮ್ ಎಲ್‌ಐಸಿ ಉಡುಪಿ ಡಿ. ಒ ಗಣಪತಿ ಎನ್. ಭಟ್ ಸ್ವಾಗತ ಬಯಸಿದರು. ದಿನೇಶ್ ಪ್ರಭು, ಮೈಕ್ರೋ ಇನ್ಶೂರೆನ್ಸ್ ಮ್ಯಾನೇಜರ್, ಎಲ್‌ಐಸಿ ಉಡುಪಿ ಧನ್ಯವಾದ ಸೂಚಿಸಿದರು

Leave a Reply

Your email address will not be published. Required fields are marked *