ಕುಕ್ಕೆ ಸುಬ್ರಹ್ಮಣ್ಯ: ಪ್ರಸಿದ್ಧ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಬ್ರಹ್ಮರಥೋತ್ಸವ ನ. 26ನೇ ಬುಧವಾರ ಪ್ರಾತಃಕಾಲ 7:29ರ ವೃಶ್ಚಿಕ ಲಗ್ನದ ಶುಭಮುಹೂರ್ತದಲ್ಲಿ ಜರುಗಲಿದೆ.
ವಾರ್ಷಿಕ ಉತ್ಸವದ ಪ್ರಮುಖ ಅಂಗವಾಗಿರುವ ಬ್ರಹ್ಮರಥೋತ್ಸವವನ್ನು ನೋಡುವುದು ಹಾಗೂ ದೇವರ ದರ್ಶನ ಪಡೆಯಲು ಭಕ್ತಾದಿಗಳು ರಾಜ್ಯದ ವಿವಿಧ ಭಾಗಗಳಿಂದ ಕುಕ್ಕೆ ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆಯಿದೆ. ದೇವಸ್ಥಾನ ಆಡಳಿತ ಮತ್ತು ಭಕ್ತಾಧಿಕಾರಿ ಮಂಡಳಿ ರಥೋತ್ಸವದ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.




ಭಕ್ತರಿಗೆ ಸುಗಮ ದರ್ಶನ, ಸಾರಿಗೆ ವ್ಯವಸ್ಥೆ ಮತ್ತು ಶಿಸ್ತುಬದ್ಧ ನಿರ್ವಹಣೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.



