ಪಟ್ರಮೆ : (ನ.04)ಪಟ್ರಮೆ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸವರ್ಗ ಕಾರ್ಯಕ್ರಮ ನ. 04 ರಂದು ನಡೆಯಿತು. ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿರುವ ಧರ್ಮಪಾಲ ಅಜ್ರಿ ಹಾಗೂ ಜಿನ್ನಪ್ಪ ಗೌಡರು ದೀಪ ಬೆಳಗಿಸಿ, ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಮಂಡಲ ಉಪಾಧ್ಯಕ್ಷ ಕೊರಗಪ್ಪ ಗೌಡ ಉದ್ಘಾಟನಾ ಭಾಷಣ ಮಾಡಿ ಶುಭ ಹಾರೈಸಿದರು.

ನಮ್ಮ ವೈಚಾರಿಕತೆ ಮತ್ತು ಪಂಚ ಪರಿವರ್ತನೆ ವಿಷಯವನ್ನು ಸೀತಾರಾಮ್ ಬೆಳಾಲು ಮಂಡನೆ ಮಾಡಿದರು.ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದೊಂದಿಗೆ ನಮ್ಮ ಪಾತ್ರ ಈ ವಿಷಯವನ್ನು ಮಹಾಬಲ ಗೌಡ ನಾಗಂದೋಡಿ ಮಂಡಿಸಿದರು.ವಿಕಸಿತ ಭಾರತದ ಅಮೃತ ಕಾಲದಲ್ಲಿ ನಮ್ಮ ಸಕ್ರಿಯತೆ ವಿಷಯವನ್ನು ವೃಷಾಂಕ್ ಖಾಡಿಲ್ಕರ್ ಅರಸಿನಮಕ್ಕಿ ಮಂಡಿಸಿದರು.ಬೂತ್ ಷಾ ಬೈಠಕ್ ಧರ್ಮಸ್ಥಳ ಮಹಾಶಕ್ತಿಕೇಂದ್ರ ಅಧ್ಯಕ್ಷ ಹರೀಶ್ ಕೆ. ಬಿ. ತೆಗೆದುಕೊಂಡು ವರದಿ ಪಡೆದುಕೊಂಡರು.
ಶಾಸಕ ಹರೀಶ್ ಪೂಂಜ ಸಮಾರೋಪ ಭಾಷಣ ಮಾಡಿದರು. ಮಂಡಲ ಉಪಾಧ್ಯಕ್ಷ ಚನ್ನಕೇಶವ ಹಾಗೂ ಪಟ್ರಮೆ ಶಕ್ತಿಕೇಂದ್ರ ಪ್ರಭಾರಿ ಸಂದೀಪ್ ರೈ ಧರ್ಮಸ್ಥಳ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.ಉದಯ ಕುಮಾರ್ ಸ್ವಾಗತಿಸಿ,ಶಕ್ತಿಕೇಂದ್ರ ಪ್ರಮುಖ್ ಹಾಗೂ ಪಂಚಾಯತ್ ಅಧ್ಯಕ್ಷ ಮನೋಜ್ ಗೌಡ ಧನ್ಯವಾದ ಸಮರ್ಪಿಸಿದರು.
ಬಿಜೆಪಿ ಗೀತೆ ಯೊಂದಿಗೆ ಸಂಪದ ಆರಂಭ ಆಗಿ ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಂಡಿತು.

Leave a Reply

Your email address will not be published. Required fields are marked *