ಕುಂದಾಪುರ (ಉಡುಪಿ): ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ವಸತಿ ಗೃಹಗಳಲ್ಲಿ ಕೊಠಡಿ ಕಾಯ್ದಿರಿಸಲು ಇರುವ ಕರ್ನಾಟಕ ದೇವಾಲಯಗಳ ವಸತಿಯ ವೆಬ್‌ಸೈಟ್ ವಿಳಾಸ ಹೋಲುವಂತೆ ನಕಲಿ ವೆಬ್‌ಸೈಟ್ ರೂಪಿಸಿ ಭಕ್ತರಿಗೆ ವಂಚಿಸಲಾಗುತ್ತಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ನಕಲಿ ವೆಬ್‌‌ಸೈಟ್‌ ಮೂಲಕ ಭಕ್ತರಿಗೆ ಲಲಿತಾಂಬಿಕಾ ಅತಿಥಿಗೃಹದ ಕೊಠಡಿಯನ್ನು ಕಾಯ್ದಿರಿಸಿ, ವಾಟ್ಸ್ಆ್ಯಪ್‌, ಪೋನ್‌‌‌‌ ಪೇ ಕ್ಯೂ ಆರ್‌ ಕೋಡ್‌‌‌‌‌‌‌‌‌‌‌‌‌‌ ಅನ್ನು ನೀಡಿ ಹಣ ಪಡೆದು, ನಕಲಿ ರಶೀದಿ ನೀಡಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಸತಿ ಗೃಹದಲ್ಲಿ ಕೊಠಡಿ ಕಾಯ್ದಿರಿಸಿ, ರಶೀದಿಯೊಂದಿಗೆ ಭಕ್ತರು ದೇಗುಲಕ್ಕೆ ಬಂದಾಗ ವಂಚನೆ ಕುರಿತು ತಿಳಿದುಬಂದಿದೆ. ನಕಲಿ ವೆಬ್‌ಸೈಟ್‌ ಜಾಲ ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಾಲಯಗಳ ವಸತಿಗೃಹಗಳಲ್ಲಿ ಕೊಠಡಿ ಕಾಯ್ದಿರಿಸುವ ವೆಬ್‌ಸೈಟ್‌ನ ಅಧಿಕೃತ ವಿಳಾಸ: http://karnatakatemplesaccommodation.com ಆಗಿದೆ ಎಂದು ಉಲ್ಲೇಖಿಸಿದ್ದಾರೆ

Leave a Reply

Your email address will not be published. Required fields are marked *