ಪುತ್ತೂರು: ಭಾರತೀಯ ವಾಯುಪಡೆಯ ಫ್ಲೈಯಿಂಗ್ ಆಫೀಸರ್ ಆಗಿ ಆಯ್ಕೆಯಾಗಿರುವ ಪುತ್ತೂರಿನ ವಿದ್ಯಾರ್ಥಿ ಆಶಿಶ್ ಶಂಕರ್ ಅವರಿಗೆ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ ಪೈ, ಪ್ರಾಂಶುಪಾಲರಾದ ದೇವಿಚರಣ್ ರೈ ಎಂ., ಉಪನ್ಯಾಸಕ–ಉಪನ್ಯಾಸಕಿಯರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿರಿಯಾ ವಿದ್ಯಾಧಿ೯ ಆಶಿಶ್ ಶಂಕರ್ ಅವರು ತಮ್ಮ ಸಾಧನೆಯ ಮೂಲಕ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ ಎಂದು ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿತು.




ಕಾರ್ಯಕ್ರಮದಲ್ಲಿ ಹಿರಿಯಾ ವಿದ್ಯಾಧಿ೯ಯ ಪ್ರೋತ್ಸಾಹ ಮತ್ತು ಶ್ರಮದ ಮಹತ್ವವನ್ನು ವಿವರಿಸಲಾಯಿತು. ಆಶಿಶ್ ಶಂಕರ್ ಅವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ವಕ್ತಾರರು ಆಶಿಸಿದರು.




