ಕುಕ್ಕೆ: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ‘ಜವಾನ್’ ಚಿತ್ರದ ನಿರ್ದೇಶಕ ಅಟ್ಲಿ (ಅರುಣ್ ಕುಮಾರ್) ಅವರು ಪತ್ನಿ ಪ್ರಿಯಾ ಹಾಗೂ ಕುಟುಂಬ ಸದಸ್ಯರೊಂದಿಗೆ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು.

ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯ ಬಳಿಕ ಅನ್ನದಾನ ಸೇವೆಯ ಮಹತ್ವವನ್ನು ಅರಿತ ಅಟ್ಲಿ ಅವರು, ದೇವಸ್ಥಾನದ ಅನ್ನದಾನ ನಿಧಿಗೆ ರೂ.10 ಲಕ್ಷ ಮೊತ್ತದ ದೇಣಿಗೆಯನ್ನು ಚೆಕ್ ಮೂಲಕ ಸಲ್ಲಿಸಿದರು. ಅನ್ನದಾನವು ಭಕ್ತರಿಗೆ ಮಹತ್ವದ ಸೇವೆಯಾಗಿದ್ದು, ಇದಕ್ಕೆ ತಮ್ಮ ಸಣ್ಣ ಸಹಕಾರವಿದೆ ಎಂಬುದು ಸಂತಸದ ವಿಷಯ ಎಂದು ಅವರು ಹೇಳಿದರು.
ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಅಧಿಕಾರಿಗಳು ನಿರ್ದೇಶಕ ಅಟ್ಲಿ ಅವರಿಗೆ ಗೌರವ ಸಲ್ಲಿಸಿ ಅಭಿನಂದಿಸಿದರು. ಅಟ್ಲಿ ಅವರ ಈ ಸೇವಾ ಮನೋಭಾವಕ್ಕೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *