ಕಡಬ: ವಿಶೇಷ ಅಗತ್ಯವಿರುವ ಹಾಗೂ ದೈಹಿಕ ನ್ಯೂನ್ಯತೆ ಹೊಂದಿರುವ ಮಕ್ಕಳ ದೈನಂದಿನ ಚಿಕಿತ್ಸೆ ಮತ್ತು ಶಾರೀರಿಕ ಸುಧಾರಣೆಗೆ ಪೂರಕವಾಗುವ ಉದ್ದೇಶದಿಂದ ಕಡಬ ಪಟ್ಟಣ ಪಂಚಾಯಿತಿ ಮಹತ್ವದ ಹೆಜ್ಜೆ ಇಟ್ಟಿದೆ.

ವಿಶೇಷ ಚೇತನ ಮಕ್ಕಳ ಫಿಜಿಯೋಥೆರಪಿ ಕೇಂದ್ರಕ್ಕೆ ಸುಸಜ್ಜಿತ ಅಡ್ಜಸ್ಟೇಬಲ್ ಟೇಬಲ್ ಅನ್ನು ಬುಧವಾರ ಹಸ್ತಾಂತರಿಸಲಾಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ತಮನ್ನಾ ಜಬಿನ ಅವರು ಉಪಕರಣವನ್ನು ಅಧಿಕೃತವಾಗಿ ಕೇಂದ್ರಕ್ಕೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ವಿಶೇಷ ಚೇತನ ಮಕ್ಕಳಿಗೆ ಸೂಕ್ತ ಸಮಯದಲ್ಲಿ ಅಗತ್ಯ ಚಿಕಿತ್ಸೆ ದೊರೆತರೆ ಅವರ ಜೀವನಮಟ್ಟ ಸುಧಾರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಮಾನವೀಯ ಕಾರ್ಯಗಳಿಗೆ ಸದಾ ಸ್ಪಂದಿಸಲಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ವಾರ್ಡ್ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಬೆಂಬಲ ಸೂಚಿಸಿದರು. ಶ್ರೀಮತಿ ಸೀತಮ್ಮ ಕೆ.ಎಸ್., ಶ್ರೀಮತಿ ತನುಜ, ಗಣೇಶ್ ನಡುವಳ್, ಅನಂತ ಅಜಿಲ (ಮುಖ್ಯೋಪಾಧ್ಯಾಯರು, ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಡಬ), ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ಕೇಂದ್ರದ ಫಲಾನುಭವಿಗಳು ಉಪಸ್ಥಿತರಿದ್ದರು.
ಈ ಉಪಕರಣದಿಂದ ಮಕ್ಕಳಿಗೆ ಪರಿಣಾಮಕಾರಿ ಫಿಜಿಯೋಥೆರಪಿ ಚಿಕಿತ್ಸೆ ನೀಡಲು ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *