ಕಡಬ: ಮಲೆನಾಡು ಜನಹಿತ ರಕ್ಷಣಾ ವೇದಿಕೆ (ರಿ.), ಕಡಬ ತಾಲೂಕು ಘಟಕದ ವತಿಯಿಂದ ನವೆಂಬರ್ 18, 2025, ಮಂಗಳವಾರ ಬೆಳಿಗ್ಗೆ 10.00 ಗಂಟೆಗೆ ಕಡಬ ತಾಲೂಕು ಕಚೇರಿ ಬಳಿ “ಹಕ್ಕೋತ್ತಾಯ ಸಭೆ” ನಡೆಯಲಿದೆ.

ಈ ಸಭೆಯಲ್ಲಿ ರೈತರ ಹಕ್ಕು, ಭೂಮಿಯ ಹಕ್ಕು ಪತ್ರ ಹಾಗೂ ಅರಣ್ಯ ಇಲಾಖೆಯ ಕಾರ್ಯಪದ್ಧತಿ ಕುರಿತು ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಗುವುದು. ಸಭೆಯಲ್ಲಿ ಪ್ರಸ್ತಾಪವಾಗಲಿರುವ ಪ್ರಮುಖ ಬೇಡಿಕೆಗಳು ಹೀಗಿವೆ:

*ಪ್ಲಾಟಿಂಗ್ ಆಗದ ರೈತರ ಕೃಷಿ ಭೂಮಿಯನ್ನು ತಕ್ಷಣ ಪ್ಲಾಟಿಂಗ್ ಮಾಡಿಕೊಡಬೇಕು.

*ಕಂದಾಯ ಇಲಾಖೆ ನೀಡಿರುವ ಹಕ್ಕು ಪತ್ರಗಳನ್ನು ಅರಣ್ಯ ಇಲಾಖೆ ರದ್ದುಪಡಿಸಬಾರದು.

*ರೈತರ ಭೂಮಿಯ ಆರ್.ಟಿ.ಸಿ. ಯಲ್ಲಿ “ಅರಣ್ಯ” ಎಂಬ ಉಲ್ಲೇಖವನ್ನು ತೆಗೆದುಹಾಕಬೇಕು.

*ಪಶ್ಚಿಮಘಟ್ಟ ಮತ್ತು ಜನವಸತಿ ಪ್ರದೇಶಗಳ ಗಡಿಯನ್ನು ಸ್ಪಷ್ಟವಾಗಿ ಗುರುತಿಸಬೇಕು.

*ಕಾಡುಪ್ರಾಣಿಗಳಿಂದ ರೈತರ ರಕ್ಷಣೆಗೆ ಹಾಗೂ ಬೆಳೆ ನಾಶವನ್ನು ತಡೆಗಟ್ಟಲು ಹಿಂದೆ ನೀಡುತ್ತಿದ್ದಂತೆ ಕೋವಿ ಪರವಾನಿಗೆ ಮರುನೀಡಬೇಕು.

*ಪರಿಸರ ಸಂರಕ್ಷಣೆ ಹೆಸರಿನಲ್ಲಿ ಬರುವ ಕಾನೂನು ರೂಪಿಸುವಾಗ ಸ್ಥಳೀಯ ಶಾಸಕರು ಹಾಗೂ ಪಂಚಾಯತ್ ಮಟ್ಟದ ಜನಪ್ರತಿನಿಧಿಗಳ ಸಲಹೆ ಪಡೆಯಬೇಕು.

*ಜಂಟಿ ಸರ್ವೆ ಮಾಡುವ ವೇಳೆ ಆ ಪ್ರದೇಶ ಭಫರ್ ಜೋನ್ ಒಳಪಡುತ್ತದೆಯೇ ಎಂಬುದನ್ನು ಅಧಿಕಾರಿಗಳು ಅಧಿಕೃತವಾಗಿ ತಿಳಿಸಬೇಕು.

ಈ ಎಲ್ಲಾ ಬೇಡಿಕೆಗಳನ್ನು ನವೆಂಬರ್ 18ರಂದು ನಡೆಯುವ ಹಕ್ಕೋತ್ತಾಯ ಸಭೆಯಲ್ಲಿ ಅಧಿಕೃತವಾಗಿ ಮಂಡಿಸಲಾಗುವುದು.

ಸಭೆಯ ಪೂರ್ವಭಾವಿಯಾಗಿ ನವೆಂಬರ್ 14, 2025, ಶುಕ್ರವಾರ ಬೆಳಿಗ್ಗೆ 10.30ಕ್ಕೆ ಕಡಬ ಒಕ್ಕಲಿಗರ ಸಮುದಾಯ ಭವನ (ಜೂನಿಯರ್ ಕಾಲೇಜ್ ರಸ್ತೆ, ಕಡಬ) ಇಲ್ಲಿ ಪೂರ್ವ ಸಭೆ ನಡೆಯಲಿದೆ.

ಈ ಸಭೆಗೆ ಕಡಬ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಮತ್ತು ಸೊಸೈಟಿ ಅಧ್ಯಕ್ಷರು, ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಎಲ್ಲಾ ಧರ್ಮಗಳ ಧಾರ್ಮಿಕ ಮುಖಂಡರು ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರನ್ನು ಆಹ್ವಾನಿಸಲಾಗಿದೆ.ಹಾಗೂ ಈ ಸಭೆಯಲ್ಲಿ ರಮಾನಂದ ಎಣ್ಣೆ ಮಜಲು – ಸಂಪರ್ಕ್ ಪ್ರಮುಖ್,ಮಲೆನಾಡು ಜನಹಿತ ರಕ್ಷಣಾ ವೇದಿಕೆ, ಕಡಬ ತಾಲೂಕು.
ಜಯಪ್ರಕಾಶ್ ಕೂಜುಗೋಡು – ಜಿಲ್ಲಾ ಸಮಿತಿ ಸದಸ್ಯ.
ಯೋಗೇಂದ್ರ ಬನಾರಿ – ಗ್ರಾಮ ಸಂಚಾಲಕ, ಬಲ್ಯ ಗ್ರಾಮ.
ಉಮೇಶ್ ಶೆಟ್ಟಿ ಸಾಯಿ ರಾಮ್
ನೂಜಿ ಪ್ರಮುಖ್, ನೂಜಿಬಾಳ್ತಿಲ ಗ್ರಾಮ, ಇವರು ಉಪಸ್ಥಿತರಿರಳಿದ್ದಾರೆ

Leave a Reply

Your email address will not be published. Required fields are marked *