ಕಡಬ, ಡಿ.1 — ವಿಶ್ವ ಏಡ್ಸ್ ದಿನದ ಪ್ರಯುಕ್ತ ಜೆ ಎಂ ಜೆ ಆಸ್ಪತ್ರೆಯಲ್ಲಿ ಇಂದು ‘ಜಾಗೃತಿ – ಜವಾಬ್ದಾರಿ – ಪ್ರಾರ್ಥನೆ’ ಎಂಬ ತತ್ತ್ವದೊಂದಿಗೆ ಮುಂಜಾಗ್ರತಾ ಕಾರ್ಯಕ್ರಮ ಹಾಗೂ ಸರ್ವಧರ್ಮ ಪ್ರಾರ್ಥನೆ ಆಯೋಜಿಸಲಾಯಿತು.
ಎಚ್ಐವಿ/ಎಯ್ಡ್ಸ್ ವಿರುದ್ಧದ ಹೋರಾಟದಲ್ಲಿ ಭಯಕ್ಕಿಂತ ಮಾಹಿತಿ, ತಪ್ಪು ಕಲ್ಪನೆಗಿಂತ ಸತ್ಯ, ವೈಷಮ್ಯಕ್ಕಿಂತ ಸ್ನೇಹ ಮತ್ತು ಬೆಂಬಲ ದೊಡ್ಡ ಶಸ್ತ್ರವೆಂದು ಆಸ್ಪತ್ರೆಯ ಸಿಬ್ಬಂದಿ ನೆನಪಿಸಿಕೊಂಡರು.




“ನಾವು ತಿಳಿದುಕೊಂಡಾಗ ಬದುಕು ಬದಲಾಗುತ್ತದೆ,
ನಾವು ಜಾಗೃತಿಯಾದಾಗ ಸಮಾಜ ಬಲವಾಗುತ್ತದೆ” ಎಂಬ ಸಂದೇಶ ಕಾರ್ಯಕ್ರಮದಲ್ಲಿ ಪ್ರತಿಧ್ವನಿಸಿತು.
ಈ ದಿನದ ಮೂಲ ಅರ್ಥ ಮಾನವೀಯತೆ, ಸಹಾನುಭೂತಿ ಮತ್ತು ಒಕ್ಕೂಟ ಎಂಬುದಾಗಿ ವೈದ್ಯಕೀಯ ಸಿಬ್ಬಂದಿ ಒತ್ತಿ ಹೇಳಿದರು. ಎಯ್ಡ್ಸ್ ಬಗ್ಗೆ ಜಾಗೃತಿ ಹರಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬ ಭಾವನೆಯೊಂದಿಗೆ ಭಾಗವಹಿಸಿದ ಎಲ್ಲರೂ ಪ್ರಾರ್ಥನೆ ನಡೆಸಿದರು.
ಜೆ ಎಂ ಜೆ ಆಸ್ಪತ್ರೆಯ ವತಿಯಿಂದ ಏಡ್ಸ್ ಬಗ್ಗೆ ಅರಿವು ಮೂಡಿಸುವ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ ಎಂದು ತಿಳಿಸಲಾಗಿದೆ.



