ಪುತ್ತೂರು: ಸೂರಂ ಬೈಲು ಗ್ರಾಮದ ನಿವಾಸಿ ಜಯಲಕ್ಷ್ಮಿ ಅವರ ಮನೆಗೆ ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮನೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಸುಮಾರು ₹10 ರಿಂದ ₹15 ಲಕ್ಷ ಮೌಲ್ಯದ ಆಸ್ತಿನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಅರುಣ್ ಕುಮಾರ್ ಪುತ್ತಿಲ್ ಅವರು, ಪುತ್ತಿಲ ಪರಿವಾರ ಟ್ರಸ್ಟ್ ವತಿಯಿಂದ ಜಯಲಕ್ಷ್ಮಿ ಅವರ ಕುಟುಂಬಕ್ಕೆ ತುರ್ತು ಸಹಾಯಧನವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಗ್ನಿ ಅವಘಡದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಕುಟುಂಬದ ನೆರವಿಗೆ ಸರ್ಕಾರವು ತಕ್ಷಣ ಸ್ಪಂದಿಸಿ ಮನೆ ಪುನರ್ ನಿರ್ಮಾಣಕ್ಕೆ ಅಗತ್ಯ ಸಹಾಯ ನೀಡಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ಘಟನೆಗೆ ಸೂಕ್ತ ಸ್ಪಂದನೆ ದೊರಕದಿದ್ದಲ್ಲಿ, ಮುಂದಿನ ದಿನಗಳಲ್ಲಿ ಊರಿನ ಜನರ ಸಹಕಾರದೊಂದಿಗೆ ಹಾಗೂ ಪುತ್ತಿಲ ಪರಿವಾರ ಟ್ರಸ್ಟ್ ಸದಸ್ಯರೊಂದಿಗೆ ಜಯಲಕ್ಷ್ಮಿ ಅವರ ಕುಟುಂಬದ ಜೊತೆ ನಿಂತು ಮನೆ ನಿರ್ಮಾಣ ಸೇರಿದಂತೆ ಎಲ್ಲಾ ಅಗತ್ಯ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪ್ರೇಮ್ ರಾಜ್ ಆರ್ಲಪದವು, ಶ್ರೀನಿವಾಸ್ ಕುಲಾಲು ಉಡ್ಡಂಗಲ, ಸುರೇಶ್ ತುಂಬಡ್ಕ, ಸುಖಿನ್ ರಾಜ ಕಡಂಜೆ, ಪ್ರಕಾಶ್ ಕೀಳಂಪಾಡಿ, ಸಂದೀಪ ಪ್ರದೀಪ ಪಾಣಜೆ, ವಸಂತ ಭರಣ್ಯ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್, ರವಿ ಕುಮಾರ್ ಭರಣ್ಯ, ಸೀತಾ ಪರಿವಾರದ ಮಾತೆಯರು ಹಾಗೂ ಊರಿನ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *