ಬೆಂಗಳೂರು: ನಗರದಲ್ಲಿ ಆರ್ ಬಿ ಐ ಅಧಿಕಾರಿಗಳು ಎಂಬುದಾಗಿ ಹೇಳಿಕೊಂಡು ಎಟಿಎಂಗೆ ಹಣ ತುಂಬೋದಕ್ಕೆ ತೆರಳುತ್ತಿದ್ದಂತ ವಾಹನ ಅಡ್ಡಗಟ್ಟಿ ಬರೋಬ್ಬರಿ 7.11 ಕೋಟಿ ಹಣವನ್ನು ದೋಚಿಕೊಂಡು ದುಷ್ಕರ್ಮಿಗಳು ಪರಾರಿಯಾಗಿರುವಂತ ಬೆಚ್ಚಿ ಬೀಳಿಸೋ ಘಟನೆ ನಡೆದಿದೆ.

ಬೆಂಗಳೂರಿನ ಕೇಂದ್ರ ಭಾಗದಲ್ಲಿರುವಂತ ಜಯದೇವ ಡೈರಿ ಸರ್ಕಲ್ ನಲ್ಲಿ ಈ ಬೆಚ್ಚಿ ಬೀಳಿಸೋ ರಾಬರಿ ನಡೆದಿದೆ.

7 ರಿಂದ 8 ಮಂದಿ ಇನ್ನೋವಾ ಕಾರಿನಲ್ಲಿ ಬಂದಿದ್ದಾರೆ. ತಾವು ಆರ್ ಬಿಐ ಅಧಿಕಾರಿಗಳು ಎಂಬುದಾಗಿ ವಾಹನ ಅಡ್ಡಗಟ್ಟಿದ್ದಾರೆ. ವಾಹನ ಪರಿಶೀಲನೆಗೆ ಇಳಿದಿದ್ದಾರೆ.

ಆ ಬಳಿಕ ಎಟಿಎಂ ವಾಹನದ ಸಿಬ್ಬಂದಿಗಳನ್ನು ಬೆದರಿಸಿ ಅವರ ವಾಹನದಲ್ಲಿದ್ದಂತ 7.11 ಕೋಟಿ ಹಣವನ್ನು ತಮ್ಮ ಕಾರಿಗೆ ಶಿಫ್ಟ್ ಮಾಡಿಕೊಂಡು ಸ್ಥಳದಿಂದ ಕಾಲ್ ಕಿತ್ತಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಸದ್ದಗುಂಟೆ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲಿಸಿ ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *