ನೆಲ್ಯಾಡಿ: ನೆಲ್ಯಾಡಿ ಸಮೀಪದ ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿ, ರಿಕ್ಷಾ ಚಾಲಕ ಅಜಯ್ ಕುಮಾರ್ (39) ಅವರು ಜನವರಿ 2ರಂದು ಮಧ್ಯಾಹ್ನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.





ಅಜಯ್ ಕುಮಾರ್ ಅವರು ಕೊಕ್ಕಡ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ನಿವೃತ್ತ ನೌಕರ ಕುಂಣ್ಣಕಣ್ಣನ್ ಅವರ ಪುತ್ರರಾಗಿದ್ದಾರೆ. ಅವರು ಕೆಲಕಾಲ ಸೌತಡ್ಕ ಅನ್ನಛತ್ರದಲ್ಲಿ ಕೆಲಸ ನಿರ್ವಹಿಸಿದ್ದರೂ, ನಂತರ ಸ್ವಂತ ಆಟೋರಿಕ್ಷಾ ಖರೀದಿಸಿ ಬಾಡಿಗೆ ಓಡಾಟ ನಡೆಸುತ್ತಿದ್ದರು.
ಮಾಹಿತಿ ಪ್ರಕಾರ, ಜನವರಿ 2ರಂದು ಮಧ್ಯಾಹ್ನ ಊಟದ ಬಳಿಕ ಮನೆಯಲ್ಲಿದ್ದ ಅಜಯ್ ಕುಮಾರ್ ಅವರು ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.


ಈ ದುರ್ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತರು ತಂದೆ–ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಘಟನೆ ಕುರಿತು ನೆಲ್ಯಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


