ಪುತ್ತೂರು: ತೋಟಗಾರಿಕೆ ಇಲಾಖೆಯ 2024–25ನೇ ಸಾಲಿನ ಬೇಸಿಗೆ ಬೆಳೆ ವಿಮಾ ಪರಿಹಾರ ಪಾವತಿಯನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ದ.ಕ ಜಿಲ್ಲೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ಈ ಪರಿಹಾರ ಜಮೆಯಾಗುತ್ತಿರುವುದಾಗಿ ಇಲಾಖೆ ತಿಳಿಸಿದೆ.
ಹವಾಮಾನ ವೈಪರೀತ್ಯದಿಂದ ಹಾನಿಗೊಳಗಾದ ತೋಟಗಾರಿಕೆ ಬೆಳೆಗಳಿಗೆ ಸಂಭಂಧಿಸಿದ ನಷ್ಟ ಪರಿಹಾರವನ್ನು ಭರಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಧಿಕಾರಿಗಳು ಪರಿಶೀಲಿಸಿದ ಪ್ರಮಾಣ ಆಧರಿಸಿ ಪರಿಹಾರ ಪಾವತಿ ನಡೆಯಲಿದೆ.
2024–25ರಲ್ಲಿ 1.30 ಲಕ್ಷ ಅರ್ಜಿದಾರ ರೈತರಿಗೆ ಪರಿಹಾರ ಸಲ್ಲಿಕೆಯಾಗಲಿದ್ದು, ಅಕ್ಟೋಬರ್ ತಿಂಗಳಿನಿಂದಲೇ ಈ ಪ್ರಕ್ರಿಯೆ ಆರಂಭವಾಗಿದೆ. ತಾಂತ್ರಿಕ ಕಾರಣಗಳಿಂದ ಕೆಲ ರೈತರಿಗೆ ಪರಿಹಾರ ತಡವಾಗಿರುವುದಾಗಿ ತಿಳಿದುಬಂದಿದೆ. ಇತ್ತೀಚಿನ ಕೆಲವು ದಿನಗಳಿಂದ ತಮಗೆ ವಿಮಾ ಹಣ ಜಮೆಯಾಗದ ಬಗ್ಗೆ ರೈತರಿಂದ ದೂರುಗಳು ಬಂದಿವೆ.




ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಿದ್ದು, ವಿಮಾ ಕಂಪನಿಯಿಂದ ಲಭ್ಯವಾಗುವ ಮಾಹಿತಿಗೆ ಅನುಗುಣವಾಗಿ ಪಾವತಿ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.



