ಪುತ್ತೂರು : ಭುವನ್ ಗೌಡ ಕುಂಬ್ರ(34) ಅವರು ಮಂಗಳವಾರ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ತ್ಯಾಜರಾಜನಗರ ಸಮೀಪ ವರದಿಯಾಗಿದೆ. ಧರ್ಮಪಾಲ ಮತ್ತು ಮೋಹಿನಿ ಅವರ ಪುತ್ರರಾಗಿರುವ ಭುವನ್ ಗೌಡ ರವರು ನಿಂತಿಕಲ್ಲಿನಲ್ಲಿರುವ ಕುಬೇರ ಬಾರ್ ನಲ್ಲಿ ಕ್ಯಾಶರ್ ಆಗಿ ಕೆಲಸ ಮಾಡುತ್ತಿದ್ದರು.

ಮಾ.3 ರಂದು ರಾತ್ರಿ ವೇಳೆ ಎಂದಿನಂತೆ ಕೆಲಸ ಮುಗಿಸಿ ಮನೆ ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ದಿಕ್ಕು ತಪ್ಪಿ ನಿಯಂತ್ರಣ ಕಳೆದುಕೊಂಡ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಡಿಕ್ಕಿ ರಬಸಕ್ಕೆ ಭುವನ್ ರವರು ರಸ್ತೆಗೆ ಎಸೆಯಲ್ಪಟ್ಟಿದ್ದರು ಇದನ್ನು ಕಂಡ ಅಲ್ಲೇ ಇರುವ ಮನೆಯ ಅಭಿಲಾಶ್ ಎಂಬವರು ತಕ್ಷಣವೇ ಹಿಂದು ಜಾಗರಣ ವೇದಿಕೆಯ ಅಶೋಕ ತ್ಯಾಗರಾಜರವರಿಗೆ ಕರೆ ಮಾಡಿದ್ದರು.ಸ್ಥಳಕ್ಕೆ ಬಂದ ಅಶೋಕ್ ರವರು ಗಂಭೀರ ಗಾಯಗೊಂಡಿದ್ದ ಭುವನ್ ರವರನ್ನು ಉಪಚರಿಸುತ್ತಿದ್ದ ಸಮಯಕ್ಕೆ ಕುಂಬ್ರದಿಂದ ತಿಂಗಳಾಡಿ ಕಡೆಗೆ ಬರುತ್ತಿದ್ದ ಎಕ್ಸ್ಪ್ರೆಸ್ ಕಾರು ಒಂದರಲ್ಲಿದ್ದ ರಜಾಕ್ ಮತ್ತು ಇತರರು ಸೇರಿಕೊಂಡು ಭುವನ್ ರವರನ್ನು ತಮ್ಮ ಕಾರಿನಲ್ಲಿ ಹಾಕಿಕೊಂಡು ಸಂಪ್ಯದ ಮೆಡ್ ಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹಿಂದೂ ಮುಸ್ಲಿಂ ಯುವಕರು ಸೇರಿಕೊಂಡು ಆಸ್ಪತ್ರೆಗೆ ತಂದರು ಉಳಿಯಲಿಲ್ಲ ಜೀವ ಎನ್ನುವುದೇ ಬೇಸರದ ಸಂಗತಿಯಾಗಿದೆ.

ಘಟನೆಗೆ ಸಂಬಂಧಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಭುವನ್ ಗೌಡ ಅವರ ಅಗಲಿಕೆಯಿಂದ ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ಆಳವಾದ ದುಃಖ ಮನೆಮಾಡಿದೆ.

Leave a Reply

Your email address will not be published. Required fields are marked *