ಧರ್ಮಸ್ಥಳ: ಉಗ್ರಂ ಮಂಜು ಮತ್ತು ಬಿಗ್ ಬಾಸ್ ಖ್ಯಾತಿಯ ಮಂಜು ಅವರ ವಿವಾಹ ಶುಭ ಕಾರ್ಯಕ್ರಮ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಸಡಗರದಿಂದ ನೆರವೇರಿತು. ಸಾಯಿ ಸಂಧ್ಯೆಯೊಂದಿಗೆ ಮಂಜು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬಿಗ್ ಬಾಸ್ ಸೀಸನ್ 11ರಲ್ಲಿ ಗಮನ ಸೆಳೆದಿದ್ದ ಮಂಜುನಾಥ್ ರವರ ವಿವಾಹ ಸೀಸನ್ 12ರ ತನಕ ಮುಂದೂಡಲಾಗಿತ್ತು. ಇದೀಗ ನಿಶ್ಚಿತಾರ್ಥದ ಬಳಿಕ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ಮದುವೆ ನಡೆಯಿತು.

ವಿವಾಹ ಕಾರ್ಯಕ್ರಮದಲ್ಲಿ ಹಲವು ಗಣ್ಯರು, ಸ್ನೇಹಿತರು ಹಾಗೂ ಅಭಿಮಾನಿಗಳು ಭಾಗವಹಿಸಿ ನವದಂಪತಿಗೆ ಶುಭಾಶಯ ಕೋರಿದರು. ಧರ್ಮಸ್ಥಳದ ದಿವ್ಯ ವಾತಾವರಣದಲ್ಲಿ ನಡೆದ ಈ ಮದುವೆ ಸಮಾರಂಭ ಎಲ್ಲರ ಗಮನ ಸೆಳೆಯಿತು.

Leave a Reply

Your email address will not be published. Required fields are marked *