ರಕ್ತದಾನ ಜೀವದಾನಕ್ಕೆ ಸಮನಾದ ಪುಣ್ಯಕಾರ್ಯ:ಡಾ|ಮಂಜುನಾಥ್
ಕಡಬ, ಜ. 22: ರಕ್ತದಾನ ಎನ್ನುವುದು ಆರೋಗ್ಯವಂತರಾಗಿರುವ ಪ್ರತಿಯೊಬ್ಬರೂ ಮಾಡಬಹುದಾದ ಉತ್ತಮ ಕಾರ್ಯ. ಅದು ಜೀವದಾನಕ್ಕೆ ಸಮನಾದುದು ಎಂದು ಕಡಬ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ|ಮಂಜುನಾಥ ಸಿ. ಅವರು ನುಡಿದರು.
ಅವರು ಜೇಸಿಐ ಕಡಬ ಕದಂಬದ ಪೂರ್ವಾಧ್ಯಕ್ಷ ದಿವಂಗತ ಜಯರಾಮ ಆರ್ತಿಲ ಅವರ 5ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಜೇಸಿಐ ಕಡಬ ಕದಂಬ, ಜೇಸಿಐ ಕಡಬ ಕದಂಬ ಚಾರಿಟೇಬಲ್‌ಟ್ರಸ್ಟ್‌ಹಾಗೂ ರೆಡ್‌ಕ್ರಾಸ್‌ಕಡಬ ತಾಲೂಕು ಘಟಕದ ನೇತೃತ್ವದಲ್ಲಿ ಮಂಗಳೂರಿನ ವೆನ್‌ಲಾಕ್‌ಬ್ಲಡ್‌ಬ್ಯಾಂಕ್‌ನ ಸಹಕಾರದೊಂದಿಗೆ ಕಡಬದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.



ವೆನ್‌ಲಾಕ್‌ಬ್ಲಡ್‌ಬ್ಯಾಂಕ್‌ನ ಮೇಲ್ವಿಚಾರಕ ಆ್ಯಂಟನಿ ಅವರು ರಕ್ತದಾನದ ಮಹತ್ವದ ಕುರಿತು ಮಾತನಾಡಿ ಸಮಾಜದಲ್ಲಿ ನಿರಂತರವಾಗಿ ರಕ್ತದಾನ ಮಾಡುವ ಪುಣ್ಯದ ಕೆಲಸವನ್ನು ಮಾಡುವ ದಾನಿಗಳನ್ನು ಸಂಘ ಸಂಸ್ಥೆಗಳು ಗುರುತಿಸುವ ಮೂಲಕ ಇತರರಿಗೂ ರಕ್ತದಾನ ಮಾಡಲು ಪ್ರೇರಣೆ ನೀಡುವ ಕಾರ್ಯವನ್ನು ಮಾಡಬೇಕು ಎಂದು ಹೇಳಿ ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯ ಕಂಡುಬಂದಾಗ ತತ್‌ಕ್ಷಣದ ಸ್ಪಂದನೆ ನೀಡಿ ರಕ್ತದಾನ ಮಾಡುವ ಜೇಸಿ ಕಾರ್ಯಕರ್ತರ ಸೇವಾ ಮನೋಭಾವದ ಬಗ್ಗೆ ಮೆಚ್ಚುಗೆವ್ಯಕ್ತಪಡಿಸಿದರು. ಜೇಸಿ ವಲಯ ಉಪಾಧ್ಯಕ್ಷ ಕಾಶೀನಾಥ ಗೋಗಟೆ, ಜೇಸಿ ಘಟಕದ ನಿಕಟಪೂರ್ವಾಧ್ಯಕ್ಷæ ವಿಶ್ರುತಾ ರಾಜೇಶ್, ಶಿಬಿರದ ನಿರ್ದೇಶಕ ಜಯರಾಮ ಮೂರಾಜೆ, ದಿವಂಗತ ಜಯರಾಮ ಆರ್ತಿಲ ಅವರ ಪತ್ನಿ ಗೀತಾ ಆರ್ತಿಲ, ಜೇಸಿ ಪೂರ್ವಾಧ್ಯಕ್ಷರಾದ ಶಿವಪ್ರಸಾದ್‌ರೈ ಮೈಲೇರಿ, ತಸ್ಲೀಂ ಮರ್ದಾಳ, ಜಾಫಿರ್‌ಮಹಮ್ಮದ್, ಪದಾಧಿಕಾರಿಗಳಾದ ಪ್ರಸನ್ನಕುಮಾರ್‌ಪುತ್ರಬೈಲು, ಅನೀಶ್‌ಲೋಬೋ, ರಾಜೇಶ್‌ಬರೆಮೇಲು, ನವ್ಯಾ ಕೃಷ್ಣ, ಅಮಿಶಾ ಸುಬ್ರಹ್ಮಣ್ಯ ಪ್ರಭು, ಜೋಮೋನ್, ಝಮಾನ್‌ಮುಂತಾದವರು ಉಪಸ್ಥಿತರಿದ್ದರು.
ಜೇಸಿ ಅಧ್ಯಕ್ಷ ಜೇಮ್ಸ್‌ಕ್ರಿಶಾಲ್‌ಡಿಸೋಜ ಅವರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಜೇಸಿಐ ಕಡಬ ಕದಂಬ ಚಾರಿಟೇಬಲ್‌ಟ್ರಸ್ಟ್‌ಅಧ್ಯಕ್ಷ ನಾಗರಾಜ್‌ಎನ್.ಕೆ. ಪ್ರಸ್ತಾವನೆಗೈದರು. ಜೇಸಿ ಕಾರ್ಯದರ್ಶಿ ಅಬ್ದುಲ್‌ರಹಿಮಾನ್ ವಂದಿಸಿದರು.


