ಸುಬ್ರಹ್ಮಣ್ಯದ ಕೆಎಸ್ಎಸ್ ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಸುಬ್ರಹ್ಮಣ್ಯ ಫೆಬ್ರವರಿ 26 : ಅನ್ನದಾನ,ವಸ್ತ್ರದಾನ, ನೇತ್ರದಾನ, ಭೂದಾನ, ಗೋದಾನ, ವಿದ್ಯಾದಾನ ಇವೆಲ್ಲವುಗಳಲ್ಲಿ ಶ್ರೇಷ್ಠವಾದಂತಹ ಹಾಗೂ ಮನುಷ್ಯರ ಜೀವ ಉಳಿಸುವ ದಾನ ರಕ್ತದಾನವಾಗಿದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಾಗದಿರುವುದರಿಂದ ಮನುಷ್ಯರ ದೇಹದಿಂದಲೇ ತೆಗೆದು ಇನ್ನೊಬ್ಬ ರೋಗಿಗೆ ನೀಡಬೇಕಾಗುತ್ತದೆ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಹೊಸ ಚೈತನ್ಯ ಕೂಡ ಮೂಡುತ್ತದೆ. ಆದುದರಿಂದ ರಕ್ತದ ಅವಶ್ಯಕತೆ ಹಾಗೂ ಅಗತ್ಯ ಬಿದ್ದಾಗ ಪ್ರತಿಯೊಬ್ಬರು 18 ವರ್ಷದಿಂದ ಮೇಲ್ಪಟ್ಟು 45 ಕೆಜಿ ತೂಕದ ಮೇಲಿದ್ದು 65 ವರ್ಷದ ಒಳಗಿನವರು ಯಾರು ಕೂಡ ರಕ್ತದಾನ ಮಾಡಬಹುದಾಗಿದೆ ಎಂದು ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ನ ವೈದ್ಯಾಧಿಕಾರಿ ಡಾl ರಾಮಕೃಷ್ಣರಾವ್ ನುಡಿದರು.

ಕುಕ್ಕೆ ಶ್ರೀಸುಬ್ರಹ್ಮಣ್ಯ ಕಾಲೇಜಿನಲ್ಲಿ ಗುರುವಾರ ಎನ್ ಎಸ್ ಎಸ್ ಯೂನಿಟ್ ರೆಡ್ ಕ್ರಾಸ್ ಯೂನಿಟ್ ಸ್ಕೌಟ್ ರೋವರ್ ಹ್ಯಾಂಡ್ ರೇಂಜರ್ಸ್ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಇನ್ನರ್ ವೀಲ್ ಕ್ಲಬ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯ ದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೆ ಎಸ್ ಎಸ್ ಕಾಲೇಜಿನ ಪ್ರಾಂಶುಪಾಲ ಡಾl ದಿನೇಶ್ ಪಿ ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪ್ರೊ. ರಂಗಯ್ಯ ಶೆಟ್ಟಿಗಾರ್ ಉಪಸ್ಥಿತರಿದ್ದರು. ಲಯನ್ಸ್ ಸುಬ್ರಮಣ್ಯ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ವಿಮಲಾ ರಂಗಯ್ಯ, ಕೆ ಎಸ್ ಎಸ್ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ. ರವಿ ಕಕ್ಕೆ ಪದವು ಇನ್ನರ್ವೀನ್ ಕ್ಲಬ್ ಕಾರ್ಯದರ್ಶಿ ಶೋಭಾ ಗಿರಿಧರ್, ಎನ್ ಎಸ್ ಎಸ್ ಸಂಯೋಜಕಿ ಆರತಿ, ರೇಂಜರ್ಸ್ ರೋವರ್ಸ್ ಸಂಯೋಜಕಿ ಪ್ರಮೀಳಾ, ಯೂತ್ ರೆಡ್ ಕ್ರಾಸ್ ಸಂಯೋಜಕೀ ಸ್ವಾತಿ, ರೇಂಜರ್ ರೋವರ್ ಸಂಯೋಜಕರಾದ ರಾಮಪ್ರಸಾದ್, ಹಾಗೂ ಅಶ್ವಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಕ್ತದಾನ ಮಾಡಲು ತಮುಂದು ನಾ ಮುಂದು ತಾ ಮುಂದು ಎಂದು ಉತ್ಸಾಹಿತರಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲಿ ಕೆಲವರಿಗೆ ತೂಕದ ಕೊರತೆ ಇನ್ನು ಕೆಲವರಿಗೆ ಹಿಮೋಗ್ಲೋಬಿನ್ ಕೊರತೆಯಿಂದಾಗಿ ರಕ್ತದಾನ ಮಾಡಲು ಅವಕಾಶ ಸಿಗದಿದ್ದರೂ ಒಟ್ಟು 52 ಯೂನಿಟ್ ಗಳಷ್ಟು ರಕ್ತವನ್ನು ಸಂಗ್ರಹಿಸಲಾಯಿತು.




ಎನ್ ಎಸ್ಎಸ್ ಸಂಯೋಜಕಿ ಸುಮಿತ್ರ ಕುಮಾರಿ ಸ್ವಾಗತಿಸಿದರು. ರೇಂಜರ್ ರೋವರ್ಸನ ವಿದ್ಯಾರ್ಥಿನಿ ವಿನೀತ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಸ್ವಾತಿ ಅವರು ಧನ್ಯವಾದ ಸಮರ್ಪಿಸಿದರು.



