ಕಡಬ : ತಲೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದ 10 ವರ್ಷದ ಬಾಲಕನು ಮನೆಯಲ್ಲಿದ್ದ ಔಷಧಿಯನ್ನು ಸೇವಿಸಿದ ಪರಿಣಾಮ ಮೃತಪಟ್ಟ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ನಡೆದಿದೆ.

ಈ ಕುರಿತು ಸಂಜೀವ ಪೂಜಾರಿ(50) ಕಡಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ 10 ವರ್ಷದ ಮಗನಿಗೆ ಪದೇ ಪದೇ ತಲೆನೋವು ಕಾಣಿಸಿಕೊಂಡಿದ್ದು ಮಾರ್ಚ್ 18ರ ಸಂಜೆ ತಲೆನೋವಿನ ಕಾರಣಕ್ಕೆ ಮನೆಯಲ್ಲಿದ್ದ ಔಷಧಿಯನ್ನು ಸೇವಿಸಿದ್ದ ಬಳಿಕ ಬಾಲಕನು ಮನೆಯಲ್ಲಿ ಅಸ್ವಸ್ಥನಾಗಿ ಹೊರಳಾಡುತ್ತಿರುವುದಾಗಿ ತಾಯಿಯವರು ತಿಳಿಸಿದ ಮೇರೆಗೆ ಸಂಜೀವ ಪೂಜಾರಿ ಅವರು ತಕ್ಷಣ ಮನೆಗೆ ಬಂದು ಮಗನನ್ನು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅಲ್ಲಿ ವೈದ್ಯರು ಪರಿಶೀಲಿಸಿದಾಗ ಬಾಲಕನ ಮೃತಪಟ್ಟಿರುವದಾಗಿ ಹೇಳಿದ್ದಾರೆ.

ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಯು ಡಿ ಆರ್ ಸಂಖ್ಯೆ 10/2026 ರಂತೆ ಕಲಂ 194BNSS-2023 ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಲಾಗಿದೆ.

Leave a Reply

Your email address will not be published. Required fields are marked *