ಪುತ್ತೂರು: ರಾಜಸ್ಥಾನದ ಜುನ್ಜುನುವಿನ ಪಿಲಾನಿಯಲ್ಲಿ ಡಿಸೆಂಬರ್ 16ರಿಂದ 21ರವರೆಗೆ ನಡೆಯಲಿರುವ 49ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‌ಶಿಪ್ (ಹುಡುಗರ ಮತ್ತು ಹುಡುಗಿಯರ ವಿಭಾಗ)ಗಾಗಿ ಕರ್ನಾಟಕ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆಯನ್ನು ಬೆಂಗಳೂರು ನಗರದಲ್ಲಿ ನಡೆಸಲಾಗುತ್ತಿದೆ.
ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾ ಕಳುಹಿಸಿರುವ ಸುತ್ತೋಲೆಯ ಅನುಸಾರ, ನವೆಂಬರ್ 27 ಮತ್ತು 28, 2025 ರಂದು ಬೆಳಗ್ಗೆ 9 ಗಂಟೆಗೆ ಭಾರತದ ಕ್ರೀಡಾ ಪ್ರಾಧಿಕಾರ (SAI), NSSC, ಬೆಂಗಳೂರು ಇಲ್ಲಿ ಆಯ್ಕೆ ಪ್ರಕ್ರಿಯೆ ಜರುಗಲಿದೆ.
ಅರ್ಹತೆ – ಕರ್ನಾಟಕದ ಆಟಗಾರರಿಗೆ ಮಾತ್ರ ಅವಕಾಶ
ಈ ಟ್ರಯಲ್ಸ್‌ನಲ್ಲಿ ಕರ್ನಾಟಕ ರಾಜ್ಯದ ವಾಲಿಬಾಲ್ ಆಟಗಾರರು ಮಾತ್ರ ಭಾಗವಹಿಸಲು ಅರ್ಹರು.
01.01.2008 ಅಥವಾ ನಂತರ ಜನಿಸಿದ ಬಾಲಕರು ಮತ್ತು ಬಾಲಕಿಯರು ಭಾಗವಹಿಸಬಹುದು.

ಅಂತೋನಿ ಜೋಸೆಫ್
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್
ಅವಶ್ಯಕ ದಾಖಲೆಗಳು
ಆಟಗಾರರು ಆಯ್ಕೆ ಪ್ರಕ್ರಿಯೆಗೆ ಹಾಜರಾಗುವಾಗ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು:
- ಮೂಲ ಜನ್ಮ ದಿನಾಂಕ ಪ್ರಮಾಣಪತ್ರ ಮತ್ತು ಅದರ ಜೆರಾಕ್ಸ್ ಪ್ರತಿಗಳು
- ಸರ್ಕಾರ ಅನುಮೋದಿತ ಆಸ್ಪತ್ರೆಯಿಂದ ನೀಡಲಾದ ವೈದ್ಯಕೀಯ ಪ್ರಮಾಣಪತ್ರ
- ಪುರಸಭೆ/ನಗರ ಪಾಲಿಕೆ/ಶಿಕ್ಷಣ ಸಂಸ್ಥೆಯಿಂದ ನೀಡಲಾದ ಜನನ ಪ್ರಮಾಣಪತ್ರ
(ಪ್ರಮಾಣಪತ್ರ ಕನಿಷ್ಠ 2 ವರ್ಷಗಳ ಹಿಂದೆ ನೀಡಿರಬೇಕು)
- ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆಯಲ್ಲಿರುವ ಪ್ರಮಾಣಪತ್ರಗಳಿಗೆ
ರಾಜ್ಯ ಕಾರ್ಯದರ್ಶಿಯಿಂದ ಸಹಿ ಮತ್ತು ಮೊಹರು ಮಾಡಲಾದ ಇಂಗ್ಲಿಷ್ ಅನುವಾದಿತ ಪ್ರತಿಗಳು
- ಆಧಾರ್ ಕಾರ್ಡ್ / ಪಾಸ್‌ಪೋರ್ಟ್ ಪ್ರತಿಗಳು
ಎಲ್ಲ ದಾಖಲೆಗಳಲ್ಲಿ ಉಲ್ಲೇಖಿಸಿರುವ ಜನ್ಮ ದಿನಾಂಕವು ಪರಸ್ಪರ ಹೊಂದಿಕೆಯಾಗಿರಬೇಕು.
ಪರಿಶೀಲನೆ ಬಳಿಕ ಮೂಲ ದಾಖಲೆಗಳನ್ನು ಹಿಂತಿರುಗಿಸಲಾಗುತ್ತದೆ ಮತ್ತು ಜೆರಾಕ್ಸ್ ಪ್ರತಿಗಳನ್ನು ಸಮಿತಿಯು ದಾಖಲಾತಿಗಾಗಿ ಇಟ್ಟುಕೊಳ್ಳುತ್ತದೆ.
ಕೋಚಿಂಗ್ ಕ್ಯಾಂಪ್
ಆಯ್ಕೆಯಾದ ಆಟಗಾರರಿಗೆ 15 ದಿನಗಳ ಉಚಿತ ಊಟ ಮತ್ತು ವಸತಿಯನ್ನು ಒಳಗೊಂಡ ಕೋಚಿಂಗ್ ಕ್ಯಾಂಪ್ ನೀಡಲಾಗುವುದು. ಅನುಭವಸಂಪನ್ನ ಕೋಚ್‌ಗಳ ಮಾರ್ಗದರ್ಶನದಲ್ಲಿ ತರಬೇತಿ ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಕಾರ್ಯಕಾರಿ ಸದಸ್ಯ ಸಾಲ್ಮರ ಶರೀಫ್, ಎಲ್ಲಾ ಅರ್ಹ ಆಟಗಾರರು ನಿರ್ದಿಷ್ಟ ದಾಖಲೆಗಳೊಂದಿಗೆ ರಾಜ್ಯ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಆಂಥೋನಿ ಜೋಸೆಫ್ ಅವರಿಗೆ ವಿವರಗಳನ್ನು ಸಲ್ಲಿಸಬೇಕೆಂದು ತಿಳಿಸಿದ್ದಾರೆ.

ಸಾಲ್ಮರ ಶರೀಫ್
ಕಾರ್ಯಕಾರಿ ಸದಸ್ಯರು ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್









