ಬಂಟ್ವಾಳ : ಮೇ.08ರಿಂದ ಮೇ.10ರ ವರೆಗೆ ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಲೋಕಾರ್ಪಣೆ ಹಾಗೂ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಪ್ರತಿಷ್ಠಾ ಸಾನ್ನಿಧ್ಯಾ ಕಳಶಾಭಿಷೇಕ ಕಾರ್ಯಕ್ರಮ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಂದು ನಾರಾಯಣ ಗುರು ಮಂದಿರದ ವಠಾರದಲ್ಲಿ ನಡೆಯಿತು.

ಆಮಂತ್ರಣ ಪತ್ರಿಕೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ (ರಿ.) ಗೌರವಾಧ್ಯಕ್ಷರಾದ ಎ. ರುಕ್ಕಯ ಪೂಜಾರಿ ಏಳ್ತಿಮಾರು, ಅಧ್ಯಕ್ಷರಾದ ನಾರಾಯಣ ಪೂಜಾರಿ ನಿಡ್ಯ, ಕಾರ್ಯದರ್ಶಿ ಮೋಹನ್ ಪಿ. ಎಸ್., ಟ್ರಸ್ಟಿಗಳಾದ ಡೀಕಯ್ಯ ಪೂಜಾರಿ ಕಟ್ಟದಮೂಡು, ಜಯರಾಮ ಕಲ್ಲಪಾಪು, ಶರತ್ ಸೇನೆರೆಕೋಡಿ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *