ಕಾವು, (ಡಿ.31):
ಇಂದು ಕಾವು ಬುಶ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳೊಂದಿಗೆ 28ನೇ ವರ್ಷದ ವಾರ್ಷಿಕೋತ್ಸವ ‘ಬುವಿ ಉತ್ಸವ–2025’ ಡಿಸೆಂಬರ್ 31ರಂದು ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯ ಗುರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗ್ಗೆ 9.30ಕ್ಕೆ ನಡೆಯುವ ಧ್ವಜಾರೋಹಣವನ್ನು ಬುಶ್ರ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಅಜೀಜ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ನಿರ್ದೇಶಕ ನೂರುದ್ದೀನ್ ಬಿ.ಎ. ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಬುಶ್ರ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಭಾಗವಹಿಸಲಿದ್ದಾರೆ.

ಸಂಜೆ 7 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬುಶ್ರ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಅಜೀಜ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಹಾಯಕ ಹಾಗೂ ಆರೋಗ್ಯ ಸೇವಾ ಮಂಡಳಿ ಸಂಚಾಲಕರಾದ ಪ್ರೊ. ಇಪ್ಟಿಕರ್ ಆಲಿ, ಆಳ್ವಾಸ್ ಎಜುಕೇಶನಲ್ ಫೌಂಡೇಶನ್ ಮೂಡಬಿದ್ರಿಯ ಆಡಳಿತ ಟ್ರಸ್ಟ್ ಸದಸ್ಯ ವಿವೇಕ್ ಅಲ್ವಾ, ಬುಶ್ರ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಚಿನ್ನದ ಪದಕ ವಿಜೇತ ಆಯುರ್ವೇದ ತಜ್ಞೆ ಡಾ. ಮೇಘ ಬೋರ್ಕರ್, ಸಂಕೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಗುಣಪಾಲ ಜೆ., ಡಿನ್ನೇಟಿ ಗ್ರೂಪಿನ ಕಾರ್ಯನಿರ್ವಹಣಾಧಿಕಾರಿ ಭಾತೀಷ್ ಕನಕ ಮಜಲು, ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಸವಾದ್ ಸುಳ್ಯ ಹಾಗೂ ಬುಶ್ರ ಎಜುಕೇಶನ್ ಟ್ರಸ್ಟ್ ನಿರ್ದೇಶಕ ಕಲಂದರ್ ಶಾಪಿ ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *