ಪುತ್ತೂರು : ಹೆಚ್ಚು ಲಾಭ ನೀಡುವ ಭರವಸೆ ನೀಡಿ ಮಹಿಳೆಯೊಬ್ಬರನ್ನು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ.
ಮಾ. 3ರಿಂದ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಸಜಿಲ್ ಖಾನ್ ಎಂಬ ವ್ಯಕ್ತಿ, ರಾಜಸ್ಥಾನಕ್ಕೆ ಸೇರಿದವನೆಂದು ಹೇಳಿಕೊಂಡು ವಾಟ್ಸಪ್ ಕರೆ ಮೂಲಕ ಸಂಪರ್ಕದಲ್ಲಿದ್ದು, ವಿಡಿಯೋ ಮೂಲಕ ಸಾಮಗ್ರಿಗಳನ್ನು ತೋರಿಸಿ, ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಸಮಸ್ಯೆ ಇದೆ ಎಂದು ನಂಬಿಸಿ ಮಹಿಳೆಯನ್ನು ಮೋಸಗೊಳಿಸಿದ್ದಾನೆ ಎನ್ನಲಾಗಿದೆ.




ಆರೋಪಿ ಸೂಚಿಸಿದಂತೆ ಮಹಿಳೆ ವಿವಿಧ ಹಂತಗಳಲ್ಲಿ ಹಣವನ್ನು ವರ್ಗಾಯಿಸಿದ್ದು, ಒಟ್ಟು ರೂ. 15,91,000 ಹಣ ಕಳೆದುಕೊಂಡಿದ್ದಾರೆ. ಫೋನ್ ಪೇ, ಆಕ್ಸಿಸ್ ಬ್ಯಾಂಕ್ ಸೇರಿದಂತೆ ಹಲವು ಮಾರ್ಗಗಳ ಮೂಲಕ ಸುಮಾರು 20 ಬಾರಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಹೆಚ್ಚಿನ ಹಣ ನೀಡುವುದಾಗಿ ನಂಬಿಸಿ ವಂಚನೆ ಮಾಡಿದ ಬಗ್ಗೆ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
👉 ಅಪರಿಚಿತರೊಂದಿಗೆ ಆನ್‌ಲೈನ್ ವ್ಯವಹಾರ ಮಾಡುವಾಗ ಜಾಗ್ರತೆ ವಹಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.






