ಕಡಬ: ಇಂದಿನ ಆಧುನಿಕ ಕಾಲದಲ್ಲಿ ಎಲ್ಲವೂ ಹೈಟೆಕ್ ಆಗುತ್ತಿದ್ದು, ಅನೇಕ ವಸ್ತುಗಳು ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ಜನರು ಮತ್ತೆ ಹಳೆಯ ಪದ್ಧತಿಗೆ ಮರಳಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಕಡಬದ ಹೋಟೆಲ್‌ಗಳಲ್ಲಿ ಕಬಿಣದ ಗ್ರಾಂಡ್ ಸ್ಟೌವ್ ಮೇಲೆ ಸಣ್ಣ ಸಣ್ಣ ಸ್ಟೌವ್ ಒಲೆಗಳನ್ನು ಇಟ್ಟು ಆಹಾರ ಬೇಯಿಸುತ್ತಿರುವ ದೃಶ್ಯ ಸದ್ಯ ಕಾಣಿಸಿಕೊಳ್ಳುತ್ತಿದೆ.

ಕಡಬ ತಾಲೂಕಿನಾದ್ಯಂತ ಎಲ್‌ಪಿಜಿ (LPG) ಸಿಲಿಂಡರ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಗ್ರಾಮೀಣ ಭಾಗದ ಹೋಟೆಲ್ ಉದ್ಯಮಿಗಳು ಇದರಿಂದ ಬಿಸಿ ತಟ್ಟಿದ್ದಾರೆ. ಹಲವು ದಿನಗಳಿಂದ ಕಡಬ ಪಟ್ಟಣದ ಕೆಲವು ಹೋಟೆಲ್‌ಗಳು ಕಟ್ಟಿಗೆ ಒಲೆ ಬಳಸಿ ಅಡುಗೆ ಮಾಡುತ್ತಿರುವುದು ಕಂಡುಬಂದಿದೆ.
ಮತ್ತೆ ಶುರುವಾಯ್ತು ಕಟ್ಟಿಗೆ ಒಲೆಯ ಕಾಲ!
ಸಿಲಿಂಡರ್ ಕೊರತೆಯಿಂದಾಗಿ ಅಡುಗೆ ಮಾಡಲು ಪರದಾಡುತ್ತಿರುವ ಹೋಟೆಲ್ ಮಾಲೀಕರು ತಾತ್ಕಾಲಿಕವಾಗಿ ಹಳೆಯ ಕಾಲದಂತೆ ಕಟ್ಟಿಗೆ ಒಲೆಗಳನ್ನು ಬಳಸುವ ಸ್ಥಿತಿಗೆ ಬಂದಿದ್ದಾರೆ. ಕಡಬದ ಕೆಲವೊಂದು ಪುಟ್ಟ ಹೋಟೆಲ್‌ಗಳಲ್ಲಿ ಕಟ್ಟಿಗೆ ಬಳಸಿ ಅಡುಗೆ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನ ಸಾಮಾನ್ಯರು ಇದನ್ನು ‘ಕಾಲಚಕ್ರ’ ಎಂದು ಬಣ್ಣಿಸುತ್ತಿದ್ದಾರೆ.

Leave a Reply

Your email address will not be published. Required fields are marked *