ಮಂಗಳೂರು: ನವೆಂಬರ್ 11, 2025ರಂದು ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಕಾಲೇಜಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಾಲೇಜು ಆವರಣದೊಳಗೆ “ಮತದಾನದ ಕಳವು ಸಹಿ ಅಭಿಯಾನ” ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ, ರಾಜಕೀಯ ಉದ್ದೇಶಕ್ಕಾಗಿ ಅವರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ ಎಂಬುದು ಗಮನಕ್ಕೆ ಬಂದಿದೆ.

ಶಿಕ್ಷಣ ಸಂಸ್ಥೆಯ ಒಳಗೆ ಇಂತಹ ರಾಜಕೀಯ ಚಟುವಟಿಕೆಗಳು ನಡೆಯುವುದು ಅಸಮಂಜಸ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಕಾಂಗ್ರೆಸ್ ಪಕ್ಷದ ಹಾಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಮಂಜುನಾಥ ಭಂಡಾರಿ ಅವರು ಈ ಕಾಲೇಜಿನ ಮಾಲೀಕರಾಗಿರುವುದರಿಂದ, ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಹಾಕುವ ಭಯದಿಂದ ಅಥವಾ ಒತ್ತಡದಿಂದ ಈ ಸಹಿ ಅಭಿಯಾನದಲ್ಲಿ ಭಾಗವಹಿಸಿರುವ ಸಾಧ್ಯತೆಗಳೂ ವ್ಯಕ್ತವಾಗಿವೆ.

ಈ ರೀತಿಯ ಪ್ರಚಾರವು ಯುವ ಮತದಾರರಲ್ಲಿ ತಪ್ಪು ಕಲ್ಪನೆಗಳನ್ನು ಹುಟ್ಟಿಸುವುದಷ್ಟೇ ಅಲ್ಲ, ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಮತ್ತು ಸಂವಿಧಾನಾತ್ಮಕ ಕಾರ್ಯವೈಖರಿಯ ಮೇಲಿನ ಜನರ ನಂಬಿಕೆಯನ್ನು ಕುಂದಿಸುತ್ತದೆ.

ರಾಜಕೀಯ ಉದ್ದೇಶಿತ ತಪ್ಪು ಮಾಹಿತಿ ಅಭಿಯಾನಗಳು ಪ್ರಜಾಪ್ರಭುತ್ವದ ಮೂಲ ಸಿದ್ಧಾಂತಗಳಿಗೆ ಹಾನಿಕರವಾಗಿದ್ದು, ಇಂತಹ ಘಟನೆಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯವೆಂದು ನಾಗರಿಕರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್,ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಯು. ನಂದನ್ ಮಲ್ಯ, ಜಯಂತ ಸಾಲ್ಯಾನ್, ದಿನೇಶ್ ಅಮಟೂರ್, ಭರತ್ ರಾಜ್ ಕ್ರಷ್ಣಪುರ, ಅಶ್ರಿತ್ ನೊಂಡ, ಅವಿನಾಶ್ ಸುವರ್ಣ, ನಿಶಾನ್ ಪೂಜಾರಿ, ಪ್ರಕಾಶ್ ಕೌಶಿಕ್ ಗರೋಡಿ, ವರುಣ್ ರಾಜ್ ಅಂಬಟ್, ರಕ್ಷಿತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *