ಪುತ್ತೂರು ವಲಯ ಆಯೋಜಿಸುವ ಹಿಂದೂ ಸಾಮಂತ ಅರುಸು ಸೇವಾ ಸಮಾಜ ಬಲ್ಲಾಳ (ರಿ.) ಅವರ ಆಶ್ರಯದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾಟ ಬಲ್ಲಾಳ ಪ್ರೀಮಿಯರ್ ಲೀಗ್ – ಸೀಸನ್ 4 (BPL–2026) ಪಂದ್ಯಾವಳಿ ಫೆಬ್ರವರಿ 15, 2026 (ಭಾನುವಾರ) ರಂದು ನಡೆಯಲಿದೆ.

ಪೂರ್ವಾಹ್ನ 8.00 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪಂದ್ಯಾವಳಿಯು ತಾಲೂಕು ಕ್ರೀಡಾಂಗಣ, ಕೊಂಬೆಟ್ಟು, ಪುತ್ತೂರು ನಲ್ಲಿ ಆಯೋಜಿಸಲಾಗಿದೆ. ಗ್ರಾಮೀಣ ಪ್ರತಿಭೆಗಳನ್ನು ಹೊರತರುವ ಉದ್ದೇಶದಿಂದ ಆಯೋಜಿಸಲಾದ ಈ ಟೂರ್ನಿಯಲ್ಲಿ ಹಲವು ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಹಾಗೂ ಮಹಿಳಾ ಬಂಧುಗಳಿಗಾಗಿ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ₹20,026/-, ದ್ವಿತೀಯ ಬಹುಮಾನ ₹15,026/- ಹಾಗೂ ವಿಶೇಷ BPL ಟ್ರೋಫಿ ನೀಡಲಾಗುತ್ತದೆ. ಕ್ರೀಡಾಭಿಮಾನಿಗಳಲ್ಲಿ ಈಗಾಗಲೇ ಪಂದ್ಯಾವಳಿಯ ಬಗ್ಗೆ ಭಾರಿ ಉತ್ಸಾಹ ಕಂಡುಬಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸುವ ನಿರೀಕ್ಷೆಯಿದೆ.
ಆಯೋಜಕರು ಎಲ್ಲಾ ಕ್ರೀಡಾಭಿಮಾನಿಗಳನ್ನು ಪಂದ್ಯಾವಳಿಗೆ ಆಗಮಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಆಹ್ವಾನಿಸಿದ್ದಾರೆ.

Leave a Reply

Your email address will not be published. Required fields are marked *