ಬಿಳಿನೆಲೆ: ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಬಿಳಿನೆಲೆಯ ವಿದ್ಯಾರ್ಥಿನಿ ದೀಕ್ಷಿತ ಅವರು ನಿನ್ನೆ ನಡೆದ ಜಿಲ್ಲಾಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದ 3 ಕಿಲೋಮೀಟರ್ ವಾಕ್ ರೇಸ್‌ನಲ್ಲಿ 18.01 ನಿಮಿಷಗಳಲ್ಲಿ ಗುರಿ ತಲುಪಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಈ ಸಾಧನೆಯ ಮೂಲಕ ದೀಕ್ಷಿತ ಅವರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿರುವುದು ಶಾಲೆಗೆ ಹೆಮ್ಮೆ ತಂದಿದೆ.

ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಬಿಳಿನೆಲೆಯ ಅಧ್ಯಾಪಕರು ಮತ್ತು ವಿದ್ಯಾರ್ಥಿವೃಂದ ಅವರ ಪರವಾಗಿ ದೀಕ್ಷಿತ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

Leave a Reply

Your email address will not be published. Required fields are marked *