ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯ ಪುತ್ತೂರು ಬಿಜೆಪಿ ಅಭ್ಯರ್ಥಿಯಾಗಿದ್ದ ಆಶಾ ತಿಮ್ಮಪ್ಪರವರ ಮಾನಹಾನಿ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇದೀಗ ಆಶಾ ತಿಮ್ಮಪ್ಪರವರು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಏನಿದು ಪೋಸ್ಟ್
ಇತ್ತೀಚಿಗೆ ಉಡುಪಿಗೆ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರು ಬಂದ ಸಂದರ್ಭದಲ್ಲಿ ಆಶಾ ತಿಮ್ಮಪ್ಪರವರನ್ನು ವಿಮಾನ ನಿಲ್ದಾಣದಲ್ಲಿ ಮೋದಿಜಿಯವರನ್ನು ನೋಡುವ ಭಾಗ್ಯ ನನಗೂ ಸಿಗಬಹುದು ಅಂದ್ಕೊಂಡಿದ್ದೆ ಆದರೆ ಈಗ ನಾನು ಪಕ್ಷಕ್ಕೆ ಬೇಡವಾಗಿದ್ದೇನೆ ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದೀಗ ಆಶಾ ತಿಮ್ಮಪ್ಪರವರು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಾನು ಈ ಮೇಲಿನ ವಿಳಾಸದ ಖಾಯಂ ನಿವಾಸಿಯಾಗಿರುತ್ತೇನೆ. ನಾನು ಬಿಜೆಪಿ ಪಕ್ಷದ ಕಾರ್ಯಕರ್ತೆಯಾಗಿರುತ್ತೇನೆ. ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ “ದೇಶದ ಪ್ರಧಾನಿ ಮೋದಿಜಿಯವರು ಉಡುಪಿಗೆ ಬಂದಾಗ ವಿಮಾನ ನಿಲ್ದಾಣದಲ್ಲಿ ನನಗೂ ಅವರನ್ನು ನೋಡುವ ಭಾಗ್ಯ ಸಿಗಬಹುದು ಅಂಡ್ಕೊಂಡಿದ್ದೆ, ಆದರೆ ಈಗ ನಾನು ಪಕ್ಷಕ್ಕೆ ಬೇಡವಾಗಿದ್ದೇನೆ.” ಎಂಬುದಾಗಿ ದುರುದ್ದೇಶದಿಂದ ಮಾನಹಾನಿ ಪೋಸ್ಟರ್ ಹಾಕಿ ಪ್ರಚಾರ ಮಾಡಿರುವುದು ಕಂಡು ಬರುತ್ತದೆ.
ಆದ್ದರಿಂದ ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ಪೋಸ್ಟರ್ ಹಾಕಿ ಪ್ರಚಾರ ಮಾಡಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಕಳಕಳಿಯಾಗಿ ವಿನಂತಿಸಿಕೊಳ್ಳುತ್ತೇನೆ. ಎಂದು ಪ್ರಕರಣ ದಾಖಲಿಸಿದ್ದಾರೆ.







