ಕುಂತೂರು ಪದವು, ಕಡಬ:
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂತೂರು ಪದವು ಇಲ್ಲಿನ ವಿದ್ಯಾರ್ಥಿನಿ ಧನ್ವಿ ಎನ್.ಎ ಅವರು ಜವಾಹರ ನವೋದಯ ವಿದ್ಯಾಲಯ ಮುಡಿಪು ನಡೆಸಿದ 6ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಶಾಲೆಗೆ ಕೀರ್ತಿ ತಂದಿದ್ದಾರೆ.

ಆರಿಗ ದೊಡ್ಡಮನೆ ನಿವಾಸಿಗಳಾದ ನವೀನ ಹಾಗೂ ಅಶ್ವಿನಿ ದಂಪತಿಗಳ ಪುತ್ರಿಯಾಗಿರುವ ಇವರು ತಮ್ಮ ಪರಿಶ್ರಮ ಹಾಗೂ ಸಾಧನೆಯ ಮೂಲಕ ಈ ಯಶಸ್ಸು ಸಾಧಿಸಿದ್ದಾರೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲೆಯ ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *