ಭಾರತೀಯ ಪರಂಪರೆಯಲ್ಲಿ ಹುಟ್ಟಿದ ಬೌದ್ಧ ಮತ್ತು ಸಿಖ್ಖ್ ಧರ್ಮಗಳನ್ನು ಹೊರತುಪಡಿಸಿ ಇತರ ಮತಗಳಿಗೆ ಮತಾಂತರವಾದವರಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ಎಸ್ಸಿ/ಎಸ್ಟಿ) ಸ್ಥಾನಮಾನ ಅನ್ವಯವಾಗುವುದಿಲ್ಲ ಎಂಬ ನೀಡಿದ ತೀರ್ಪು ಐತಿಹಾಸಿಕವಾಗಿದೆಯೆಂದು ದಿನೇಶ್ ಅಮ್ಟೂರು ತಿಳಿಸಿದ್ದಾರೆ.





ಈ ತೀರ್ಪು ಮೂಲಕ ಅವರ ಸಂವಿಧಾನಾತ್ಮಕ ಆಶಯಗಳನ್ನು ನ್ಯಾಯಾಲಯವು ಎತ್ತಿಹಿಡಿದಂತಾಗಿದೆ ಎಂದು ಅವರು ಹೇಳಿದ್ದಾರೆ.
ಕೆಲವರು ವಿವಿಧ ರೀತಿಯ ಆಮಿಷಗಳನ್ನು ಒಡ್ಡಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರನ್ನು ಮತಾಂತರ ಮಾಡುವ ಪ್ರವೃತ್ತಿಗೆ ಈ ತೀರ್ಪು ಕಡಿವಾಣ ಹಾಕಲಿದೆ. ಇದರಿಂದ ಸಮಾಜದಲ್ಲಿ ಸಮತೋಲನ ಕಾಪಾಡಲು ಸಹಾಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.



ಸರ್ವೋಚ್ಚ ನ್ಯಾಯಾಲಯದ ಈ ಮಹತ್ವದ ತೀರ್ಪನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಉಳಿಸಿ ಬೆಳೆಸುವಲ್ಲಿ ನ್ಯಾಯಾಲಯ ವಹಿಸಿರುವ ಪಾತ್ರಕ್ಕೆ ಅಭಿನಂದನೆಗಳು ಹಾಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ದಿನೇಶ್ ಅಮ್ಟೂರು ತಿಳಿಸಿದ್ದಾರೆ.
– ದಿನೇಶ್ ಅಮ್ಟೂರು
ಮಾಜಿ ಉಪಾಧ್ಯಕ್ಷರು, ತಾಲೂಕು ಪಂಚಾಯತ್ ಬಂಟ್ವಾಳ
ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ದಕ್ಷಿಣ ಕನ್ನಡ

