ಪುತ್ತೂರು: ಎಲೆಕ್ಟ್ರಿಕ್ ರಿವರ್ಸ್ ತ್ರಿಚಕ್ರ ವಾಹನ (ಇ-ಆಟೋ) ಮಾರುಕಟ್ಟೆಗೆ ಹೊಸ ಬಲ ನೀಡುವಂತೆ ಮಹೀಂದ್ರ ಕಂಪನಿಯ ಇ-ಆಟೋ ರಿಕ್ಷಾವನ್ನು ಪುತ್ತೂರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಫೆಬ್ರವರಿ 12ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ತೂರಿನಲ್ಲಿ ಶೋರೂಮ್‌ನಲ್ಲೂ ಇ-ಆಟೋ ಬಿಡುಗಡೆ ಮಾಡಲಾಗಿದೆ.

ಈ ಇ-ಆಟೋ ರಿಕ್ಷಾ 200 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ರೇಂಜ್ ಮೋಡ್‌ನಲ್ಲಿ 40 ಕಿ.ಮೀ, ರ್ಯಾಪಿಡ್ ಮೋಡ್‌ನಲ್ಲಿ 45 ಹಾಗೂ ಹೈ ಸ್ಪೀಡ್ ಮೋಡ್‌ನಲ್ಲಿ 55 ಕಿ.ಮೀ ವೇಗದಲ್ಲಿ ಸಂಚರಿಸಬಹುದಾಗಿದೆ. ರೀಜೆನೆರೇಟಿವ್ ಬ್ರೇಕಿಂಗ್ ವ್ಯವಸ್ಥೆ ಇದರಲ್ಲಿ ಅಳವಡಿಸಲಾಗಿದ್ದು, ಸ್ಲೋ, ಬೆಸ್ಟ್ ಹಾಗೂ ರಿವರ್ಸ್ ತಂತ್ರಜ್ಞಾನಗಳೊಂದಿಗೆ ಬ್ಯಾಟರಿ ಕಾರ್ಯನಿರ್ವಹಿಸುತ್ತದೆ.

ಬ್ಯಾಟರಿ ಸಾಮರ್ಥ್ಯ 11.7 ಕಿಲೋವಾಟ್ ನಿಗದಿಪಡಿಸಲಾಗಿದ್ದು, ಪೀಕ್ ಪವರ್ 10 ಕಿಲೋವಾಟ್ ಹಾಗೂ ಟಾರ್ಕ್ 56 ಎನ್‌ಎಂ ಇದೆ. 0 ರಿಂದ 100 ಶೇಕಡಾ ಬ್ಯಾಟರಿ ಚಾರ್ಜ್ ಆಗಲು ಸುಮಾರು 5.15 ಗಂಟೆ, 0 ರಿಂದ 80 ಶೇಕಡಾ ಚಾರ್ಜ್ ಆಗಲು 3.50 ಗಂಟೆ ಬೇಕಾಗುತ್ತದೆ.
ಫೋನ್ ಹೋಲ್ಡರ್, ಚಾರ್ಜಿಂಗ್ ಪೋರ್ಟ್, ಗ್ಲೋವ್ ಬಾಕ್ಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ. ಎಕ್ಸ್ ಶೋರೂಮ್ ಬೆಲೆ ರೂ. 3,58,999 ಆಗಿದ್ದು, ಹೆಚ್ಚಿನ ಮಾಹಿತಿಗಾಗಿ 8296395888 ಸಂಖ್ಯೆಯನ್ನು ಸಂಪರ್ಕಿಸಬಹುದು.
ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯ ನಡುವೆಯೂ ಕಡಿಮೆ ಖರ್ಚಿನಲ್ಲಿ ಸಂಚಾರ ಮಾಡಲು ಈ ಇ-ಆಟೋ ಸೂಕ್ತ ಪರ್ಯಾಯವಾಗಲಿದೆ ಎಂದು ವಿತರಕರು ತಿಳಿಸಿದ್ದಾರೆ. ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಹೊಂದಿರುವ ಈ ವಾಹನ ಪುತ್ತೂರಿನ ಆಟೋ ಚಾಲಕರಿಗೆ ಹೊಸ ಆಯ್ಕೆಯಾಗಲಿದೆ.

Leave a Reply

Your email address will not be published. Required fields are marked *