ಸುಳ್ಯ : ‘ಬಿಲ್ಲವ ಸಂದೇಶ್ ‘ ಎನ್ನುವ ಫೇಸ್ಬುಕ್ ಖಾತೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ರವರನ್ನು ತೀರ ಅವಮಾನಕರವಾಗಿ ಬರೆದು ಶ್ರದ್ಧಾಂಜಲಿ ಸಲ್ಲಿಸಿರುವುದನ್ನು ಸುಳ್ಯ ಮಂಡಲ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ರೈ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ.

ಕುಮಾರಿ ಭಾಗೀರಥಿ ಮುರುಳ್ಯ ಸುಳ್ಯದ ಕ್ರೀಯಾಶೀಲ ಹಾಗೂ ಜನಪ್ರಿಯ ಶಾಸಕರಾಗಿದ್ದು, ತನ್ನ ಪ್ರಾರಂಭದ ದಿನಗಳಿಂದಲೇ ನಿರಂತರವಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಓಡಾಡುತ್ತಾ ವಿರೋಧ ಪಕ್ಷದ ಸದಸ್ಯರಾಗಿದ್ದರು ಕೂಡ ಸಚಿವರುಗಳಿಗೆ ಮನವಿಯನ್ನು ಸಲ್ಲಿಸುತ್ತಾ ಸಾಕಷ್ಟು ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ತಂದುಕೊಟ್ಟ ಹೆಮ್ಮೆಯ ಶಾಸಕರಾಗಿದ್ದಾರೆ. ಮಾತ್ರವಲ್ಲದೇ ಕ್ಷೇತ್ರದ ಎಲ್ಲಾ ಸಮುದಾಯದ ಜನರೊಂದಿಗೆ ಉತ್ತಮ ಒಡನಾಟವನ್ನು ಇಟ್ಟುಕೊಂಡ ಶಾಸಕಿ.

ಇದನ್ನು ಸಹಿಸದ ಕೆಲವು ವ್ಯಕ್ತಿಗಳು ಇವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಇವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಸಂದೇಶಗಳನ್ನು ಹಾಕಿ ಅವರ ತೇಜೋವಧೆ ಮಾಡುವುದನ್ನು ಶಿವಪ್ರಸಾದ್ ರೈ ಅವರು ತೀವ್ರವಾಗಿ ಖಂಡಿಸಿರುತ್ತಾರೆ. ತಕ್ಷಣ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿರುತ್ತಾರೆ.

Leave a Reply

Your email address will not be published. Required fields are marked *