ಪುತ್ತೂರು:
ಬೆಳೆ ವಿಮೆ ಬಿಡುಗಡೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸ್ಪಷ್ಟನೆ ನೀಡಿದ್ದಾರೆ. ಅಧಿಕಾರಿಗಳೊಂದಿಗೆ ಎರಡು ಬಾರಿ ಮಾತನಾಡಿರುವುದಾಗಿ ತಿಳಿಸಿದ್ದಾರೆ.

“ಈ ತಿಂಗಳ ಕೊನೆಯಲ್ಲಿ ವಿಮೆ ಹಣ ರೈತರ ಖಾತೆಗೆ ಜಮಾಗುವ ಸಾಧ್ಯತೆಯಿದೆ” ಎಂದು ಶಾಸಕ ಹೇಳಿದ್ದಾರೆ. ನವೆಂಬರ್‌ 30ರೊಳಗೆ ಒಂದು ಹಂತದ ವಿಮಾ ಮೊತ್ತ ಪಾವತಿಸಲಾಗುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರೂ ಅದು ಆಗದಿರುವುದನ್ನು ಅವರು ಉಲ್ಲೇಖಿಸಿದರು.

ವಿಮೆ ಹಣ ಪಾವತಿ ತಡವಾಗಲು ಸರ್ಕಾರದ ಜಾತಿ ಸೆನ್ಸಸ್ ಕಾರ್ಯವೇ ಕಾರಣ, ಏಕೆಂದರೆ ಎಲ್ಲ ಅಧಿಕಾರಿಗಳೂ ಆ ಕೆಲಸದಲ್ಲಿ ನಿರತರಾಗಿದ್ದರಿಂದ ದಾಖಲಾತಿಗಳ ಪರಿಶೀಲನೆ ಸರಿಯಾಗಿ ನಡೆಯದೆ ವಿಳಂಬ ಉಂಟಾಗಿದೆ ಎಂದು ಹೇಳಿದರು.

ಈಗ ವಿಮಾ ಕಂಪನಿಯವರು ಕೊನೆಯ ಹಂತದ ದಾಖಲೆಗಳ ಪುನರ್‌ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕಾರಣಕ್ಕೆ ಸ್ವಲ್ಪ ತಡವಾಗಿದೆ ಎಂದ ಅವರು, “ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ. ರೈತರಿಗೆ ಶೀಘ್ರದಲ್ಲೇ ವಿಮೆ ಹಣ ಜಮಾಗುವದು” ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *