ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ಬಂಡಾಯ ಸಾಹಿತಿ ಹಾಗೂ ಮಾಜಿ ಸಚಿವೆಯಾದ ಬಿ.ಟಿ. ಲಲಿತ ನಾಯಕ್ ಅವರ ವಿರುದ್ಧ ದಾವಣಗೆರೆ ಪೊಲೀಸ್ ಇಲಾಖೆಯಲ್ಲಿ FIR ದಾಖಲಾಗಿದೆ.
ನವೆಂಬರ್ 23, ಭಾನುವಾರ ದಾವಣಗೆರೆ ನಗರದ ಎ.ವಿ.ಕೆ ಕಾಲೇಜುದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಲಲಿತ ನಾಯಕ್,
“ರಾಮಾಯಣದಲ್ಲಿರುವ ಶ್ರೀರಾಮ, ಲಕ್ಷ್ಮಣ, ರಾವಣರು ಆದರ್ಶ ವ್ಯಕ್ತಿಗಳಲ್ಲ; ಅವರು ಕ್ರೂರಿಗಳು” ಎಂದು ಹೇಳಿಕೆ ನೀಡಿದ್ದರಿಂದ ವಿವಾದ ಉಲ್ಬಣಗೊಂಡಿದೆ.




ಅದಲ್ಲದೆ ಅವರು,
“ಭಕ್ತಿಯ ಜೊತೆಗೆ ಬೆರೆತ ಮೌಢ್ಯಗಳು ಜನರ ವಿಚಾರಶಕ್ತಿಯನ್ನು ಹಾಳುಮಾಡಿವೆ. ದೇಗುಲಗಳು ಜನರನ್ನು ಮೌಢ್ಯತೆಯತ್ತ ತಳ್ಳುತ್ತಿವೆ, ಗ್ರಂಥಾಲಯಗಳು ಜ್ಞಾನಾರ್ಜನೆಗೆ ಕರೆದು ಕೊಡುತ್ತವೆ. ಮೌಲ್ಯಗಳಿಂದ ಹೊರಬರಲು ಶಿಕ್ಷಣವೇ ಪರಿಹಾರ. ಮನುಷ್ಯನ ತಪ್ಪುಗಳೇ ಸಾಹಿತ್ಯ–ಮಹಾಕಾವ್ಯಗಳಾಗಿ ರೂಪಗೊಂಡಿವೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧಕ್ಕೆ ಗುರಿಯಾದ ಹಿನ್ನೆಲೆಯಲ್ಲಿ, ಸ್ಥಳೀಯರಿಂದ ಬಂದ ದೂರು ಆಧಾರದ ಮೇಲೆ FIR ದಾಖಲಾಗಿದೆ.



