ಪುತ್ತೂರು : ಹೂವಿನ ವ್ಯಾಪಾರಸ್ಥರಾಗಿದ್ದ ಹರೀಶ ಯಾನೆ ಹರ್ಷ (47) ಅವರು ಅಲ್ಪಕಾಲದ ಅಸೌಖ್ಯದಿಂದ ಡಿಸೆಂಬರ್ 31ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತಃ ಸಾಮೆತಡ್ಕ ನಿವಾಸಿಯಾಗಿದ್ದು, ಪ್ರಸ್ತುತ ಪಾಂಗ್ಲಾಯಿ ನಿವಾಸಿಯಾಗಿದ್ದ ಹರೀಶ ಅವರು ಪುತ್ತೂರಿನಲ್ಲಿ ಹೂವಿನ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಅವರ ನಿಧನ ಸುದ್ದಿ ವ್ಯಾಪಾರ ವಲಯ ಸೇರಿದಂತೆ ಸಾರ್ವಜನಿಕರಲ್ಲಿ ಶೋಕವನ್ನುಂಟುಮಾಡಿದೆ.
ಮೃತರು ಪತ್ನಿ ನಾಗರತ್ನ, ಮಗಳು ಸಿಂಚನ, ತಂದೆ ಕೊರಗಪ್ಪ, ತಾಯಿ ಪರಮೇಶ್ವರಿ ಹಾಗೂ ಸಹೋದರ ಸುಧೀರ್ ಅವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *