ಕುಕ್ಕೆ ಶ್ರೀ ಸುಬ್ರಹ್ಮಣ್ಯ:
ವಿಶ್ವ ಹಿಂದೂ ಪರಿಷದ್ ಹಾಗೂ ಹಿಂದೂ ಜಾಗರಣ ವೇದಿಕೆಯು ಶ್ರೀ ಕ್ಷೇತ್ರ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆಸಿದ ಜಂಟಿ ಹೋರಾಟಕ್ಕೆ ಫಲ ದೊರೆತಿದ್ದು, ಸುಬ್ರಹ್ಮಣ್ಯದ ಕಿರುಷಷ್ಠಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಅನ್ಯಮತೀಯರನ್ನು ದೂರವಿಟ್ಟು ಸಂಪ್ರದಾಯಕ್ಕೆ ಅನುಗುಣವಾಗಿ ಕಾರ್ಯಕ್ರಮ ಆಯೋಜಿಸುವ ಮೂಲಕ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ.

ಹಿಂದೂ ಧಾರ್ಮಿಕ ಕ್ಷೇತ್ರವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರೋಟೋಕಾಲ್ ನೆಪದಲ್ಲಿ ಅನ್ಯಧರ್ಮೀಯರನ್ನು ಆಹ್ವಾನಿಸುವುದು ಸಂಪ್ರದಾಯ ಹಾಗೂ ಹಿಂದೂ ಧಾರ್ಮಿಕ ಕಾಯ್ದೆಗೆ ವಿರುದ್ಧವಾಗಿದೆ ಎಂದು ವಿಶ್ವ ಹಿಂದೂ ಪರಿಷದ್ ಮತ್ತು ಹಿಂದೂ ಜಾಗರಣ ವೇದಿಕೆಗಳು ಆಕ್ಷೇಪ ವ್ಯಕ್ತಪಡಿಸಿ, ಶ್ರೀ ಕ್ಷೇತ್ರ ಸಂರಕ್ಷಣಾ ಸಮಿತಿಯ ಮೂಲಕ ಪ್ರತಿಭಟನೆ ನಡೆಸಿ ತಿದ್ದುಪಡಿ ಮಾಡುವಂತೆ ಒತ್ತಾಯಿಸಿತ್ತು.

ಹಿಂದೂ ಭಾವನೆಗಳಿಗೆ ಮನ್ನಣೆ ನೀಡಿದ ಆಡಳಿತ ಮಂಡಳಿ, ಹಿಂದು ಪರ ಸಂಘಟನೆಗಳ ಹೋರಾಟವನ್ನು ಪರಿಗಣಿಸಿ ಡಿಸೆಂಬರ್ 26ರಂದು ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಅನ್ಯಮತೀಯರ ಭಾಗವಹಿಸುವಿಕೆ ಇಲ್ಲದೆ, ಸಂಪೂರ್ಣವಾಗಿ ಹಿಂದೂ ಸಂಪ್ರದಾಯ ಮತ್ತು ಶ್ರದ್ಧೆಯೊಂದಿಗೆ ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ನಡೆಸಿದೆ ಎಂದು ಶ್ರೀ ಕ್ಷೇತ್ರ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಚಿದಾನಂದ ಕಂದಡ್ಕ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ರಾಜೇಶ್ ಎನ್.ಎಸ್., ಕಿಶೋರ್ ಶಿರಾಡಿ, ಜಯಪ್ರಕಾಶ್ ಕುಜುಗೋಡು, ಪ್ರಸನ್ನ ದರ್ಬೆ, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖರಾದ ಮೋಹನದಾಸ್ ಕಾಣಿಯೂರು, ವಿನೋದ್ ಸುಬ್ರಹ್ಮಣ್ಯ, ಪ್ರಮೋದ್ ರೈ ಕಡಬ, ವಿಶ್ವ ಹಿಂದೂ ಪರಿಷದ್‌ನ ದಿನೇಶ್ ಸಂಪ್ಯಾಡಿ, ಅಚ್ಚುತ ಗೌಡ, ಮೋನಪ್ಪ ಮಾನಾಡು, ಮನೋಜ್ ಸುಬ್ರಹ್ಮಣ್ಯ, ಶ್ರೀಕುಮಾರ್ ಬಿಲದ್ವಾರ, ಚಂದ್ರಶೇಖರ ಮರ್ದಾಳ, ಗಿರೀಶ್ ಆಚಾರ್ಯ, ಲಕ್ಷ್ಮೀಶ್ ಇಜನಡ್ಕ, ಶ್ರೀಮತಿ ಶೋಭಾ ಗಿರಿಧರ್, ಶ್ರೀಮತಿ ವನಜ ವಿ. ಭಟ್, ರಾಮಚಂದ್ರ ಸುಬ್ರಹ್ಮಣ್ಯ, ಬುಕ್ಷಿತ್ ನೇರ್ಪಾಡಿ, ವಿನೋದ್ ಕುಲ್ಕುಂದ, ರಾಧಾಕೃಷ್ಣ ಆರವಾರ, ದಿಲೀಪ್ ಉಪ್ಪಳಿಕೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *