ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಮಂಗಳವಾರ ಅದ್ದೂರಿ ಧರ್ಮಧ್ವಜಾರೋಹಣ ಸಮಾರಂಭ ನಡೆಯಲಿದೆ. ಪ್ರಧಾನಿ ಮೋದಿ ಮಧ್ಯಾಹ್ನ 12ಕ್ಕೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸಹಿತ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ.

ಈ ಧ್ವಜಾರೋಹಣ ದೇಗುಲ ನಿರ್ಮಾಣ ಪೂರ್ಣ ವಾಗಿದೆ ಎಂದು ಸಾರುವ ಸಂಕೇತ ಎಂದು ಶ್ರೀ ರಾಮಜನ್ಮ ಭೂಮಿ ದೇಗುಲ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.

ಏನಿದು ಧರ್ಮಧ್ವಜ?
ಧ್ವಜವು 10 ಅಡಿ ಎತ್ತರ, 20 ಅಡಿ ಉದ್ದವಿದೆ. ಶ್ರೀ ರಾಮನ ತೇಜಸ್ಸು, ಶೌರ್ಯವನ್ನು ಸಂಕೇತಿಸುವ ವಿಕಿರಣ ಸೂರ್ಯನ ಚಿತ್ರವನ್ನು ಹೊಂದಿದೆ. ಅದರಲ್ಲಿ “ಓಂ’, ಕೋವಿದಾರ ಮರದ ಚಿತ್ರವಿದೆ. ರಾಮರಾಜ್ಯದ ಆದರ್ಶ ಸಾಕಾರ ಗೊಳಿಸುವ ಘನತೆ, ಏಕತೆ, ನಿರಂತರತೆಯ ಸಂದೇಶ ನೀಡಲಿದೆ.

Leave a Reply

Your email address will not be published. Required fields are marked *