ಕಾಫು: ಪಿರ್ಯಾದಿದಾರರಾದ ಫಾಮಿದಾ ಬಾನು (30) 3-269 ಫರಾನ್ ಮಂಝಿಲ್, ಫಕಿರಣಕಟ್ಟೆ, ಮಲ್ಲಾರು ಗ್ರಾಮ, ಕಾಪು ಇವರು ಪ್ರಸ್ತುತ ಉಡುಪಿಯ ಜಯಲಕ್ಷ್ಮೀ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಈ ಹಿಂದೆ ಮೂಡಬಿದ್ರೆಯ ಬೆಳ್ವಾಯಿಯ ನಿವಾಸಿಯಾದ ಮೊಹಮ್ಮದ್ ಶಕೀಲ್ ರವರೊಂದಿಗೆ ವಿವಾಹ ಮಾಡಿಕೊಂಡಿದ್ದು, ನಂತರ ಇಬ್ಬರ ನಡುವೆ ವೈಮಸ್ಸು ಉಂಟಾಗಿ ವಿಚ್ಚೇದನವಾಗಿರುತ್ತದೆ.

ನಂತರ ಫಿರ್ಯಾದುದಾರರು 2022 ನೇ ಇಸವಿಯಲ್ಲಿ ಕೆಲಸಕ್ಕೆಂದು ಸೌದಿಗೆ ಹೋಗಿದ್ದು, ಅಲ್ಲಿ ಸಯ್ಯದ್ ಅಪ್ರಿದ್ ಎಂಬವರ ಪರಿಚಯ ಆಗಿರುತ್ತದೆ. ಫಿರ್ಯಾದುದಾರರು ಅವನಲ್ಲಿ ತನಗೆ ಮದುವೆಯಾಗಿ ವಿಚ್ಚೇದನವಾಗಿರುವ ವಿಚಾರ ಹಾಗೂ 3 ಜನ ಮಕ್ಕಳಿರುವ ವಿಚಾರವನ್ನು ತಿಳಿಸಿದ್ದು, ಅವನು ಫಿರ್ಯಾದುದಾರರನ್ನು ಮದುವೆಯಾಗುವುದಾಗಿ ತಿಳಿಸಿರುತ್ತಾರೆ. 2023 ನೇ ಇಸವಿಯಲ್ಲಿ ಸಯ್ಯದ್ ಅಪ್ರಿದ್ ಫಿರ್ಯಾದುದಾರರ ಮನೆಗೆ ಬಂದು 2 ದಿನ ವಾಸವಾಗಿದ್ದು, ಆತನೊಂದಿಗೆ ತಿರುಗಾಡಲು ಕರೆದುಕೊಂಡು ಹೋಗುತ್ತಿದ್ದು, ಅಲ್ಲದೇ ಮಕ್ಕಳ ಖರ್ಚಿಗೆ ಹಣವನ್ನು ಸಹ ನೀಡುತ್ತಿದ್ದು, ಬಳಿಕ ವಿದೇಶಕ್ಕೆ ಹೋಗಿ ಬಂದು ಮದುವೆಯಾಗುವುದಾಗಿ ತಿಳಿಸಿರುತ್ತಾನೆ. ಮದುವೆಗೆ ಸಯ್ಯದ್ ಅಪ್ರಿದ್ ರವರ ಮನೆಯವರ ತೀವ್ರ ವಿರೋಧವಿದ್ದುದರಿಂದ ಎಲ್ಲವನ್ನು ಸರಿ ಮಾಡಿಕೊಂಡು ಮದುವೆಯಾಗುವುದಾಗಿ ತಿಳಿಸಿದ್ದು, ದಿನಾಂಕ:23-10-2025 ರಂದು ಸಯ್ಯದ್ ಅಪ್ರಿದ್ ನು ವಿದೇಶದಿಂದ ನೇರವಾಗಿ ಫಿರ್ಯಾದುದಾರರ ಮನೆಗೆ ಬಂದು ನಾವಿಬ್ಬರು ಮದುವೆಯಾಗುವ ಎಂದು ತಿಳಿಸಿ ದಿನಾಂಕ 24/10/2025 ರಂದು ಮುಸ್ಲೀಂ ಸಂಪ್ರದಾಯದಂತೆ ಮದುವೆಯಾಗಿರುತ್ತಾನೆ. ಮದುವೆಯಾದ 4 ದಿನ ಮಾತ್ರ ಮನೆಯಲ್ಲಿದ್ದು, ನಂತರ ತನ್ನ ತಾಯಿಯ ಆರೋಗ್ಯ ಸರಿಯಿಲ್ಲ. ಅವರನ್ನು ನೋಡಿಕೊಂಡು ಎಲ್ಲವನ್ನು ವಿವರಿಸಿ ಬರುವುದಾಗಿ ಹೇಳಿ ಫಿರ್ಯಾದುದಾರರಿಗೆ ಸೇರಿದ ಕೆಎ-19-ಪಿ-5982 ವಾಹನವನ್ನು ತೆಗೆದುಕೊಂಡು ಹೋಗಿರುತ್ತಾನೆ.

ಅಲ್ಲದೆ ತನ್ನ ಬಳಿ ಈಗ ಹಣ ಇಲ್ಲ, ನಿನ್ನ ಬಳಿ ಇರುವ ಚಿನ್ನವನ್ನು ನೀಡುವಂತೆ ಕೇಳಿದ್ದು, ಅದರಂತೆ ಫಿರ್ಯಾದುದಾರರು ತನ್ನ 5 ಪವನ್ ಚಿನ್ನದ ಸರವನ್ನು ಸಯ್ಯದ್ ಅಪ್ರಿದ್ ನೀಡಿದ್ದನನು ತೆಗೆದುಕೊಂಡು ಹೋಗಿರುತ್ತಾರೆ. ಆದರೆ ಆತ ಮನೆಬಿಟ್ಟು ಹೋದ ನಂತರ ಈಗ ಫಿರ್ಯಾದುದಾರರ ಯಾವುದೇ ಸಂಪರ್ಕಕ್ಕೆ ಸಿಗದೇ, ಪೋನ್ ಕರೆ ಮಾಡಿದರೂ ಸಹಾ ಪೋನ್ ಕರೆಯನ್ನು ಸ್ವೀಕರಿಸುತ್ತಿಲ್ಲ. ಸಯ್ಯದ್ ಅಪ್ರಿದ್ ರವರ ತಾಯಿ ನಾಸಿರಾ, ತಮ್ಮ ಆದಿಲ್, ಆತನ ತಾಯಿಯ ತಂಗಿಯಾದ ಅಸ್ಮಾ, ರುಬೇನಾ, ಆತನ ಸಂಬಂಧಿ ಹೈದರ್, ಮೂಸ, ರವರು ಫಿರ್ಯಾದುದಾರರಿಗೆ ಕರೆ ಮಾಡಿ ಅವಾಚ್ಯವಾಗಿ ಬೈದು ಆತನನ್ನು ಬಿಡು, ನೀನು ಬೇರೆ ಮದುವೆಯಾಗೂ, ಇಲ್ಲದಿದ್ದರೆ ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಸುಮ್ಮನೆ ಬಿಡುವುದಿಲ್ಲ. ನಿಮ್ಮನ್ನು ಹೇಗೆ ಬೇರೆ ಮಾಡಬೆಕೆಂದು ನಮಗೆ ಗೊತ್ತಿದೆ ಎಂದು ಬೆದರಿಕೆ ಹಾಕಿರುತ್ತಾರೆ. ಫಿರ್ಯಾದುದಾರರನ್ನು ಮದುವೆಯಾಗಿ ಚೆನ್ನಾಗಿ ನೋಡಿಕೊಳ್ಳುವುದಾಗಿ ನಂಬಿಸಿ ಮದುವೆಯಾಗಿ ಈಗ ಫಿರ್ಯಾದುದಾರರ ಕಾರು ಹಾಗೂ ಚಿನ್ನವನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 145/2025 ಕಲಂ: 318, 318(2), 352 ರಂತೆ ಪ್ರಕರಣ ದಾಖಲಾಗಿರುತ್ತದೆ.

