ಕಾಸರಗೋಡು: ಕುಣಿಯದಲ್ಲಿ ನಡೆದ ಸಮಸ್ತದ 100ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ AIKMCC ಮಂಗಳೂರು ಆಂಬುಲೆನ್ಸ್ ತಂಡವು ಐದು ದಿನಗಳ ಕಾಲ ಉಚಿತ ವೈದ್ಯಕೀಯ ಸೇವೆಯನ್ನು ಯಶಸ್ವಿಯಾಗಿ ನಿರ್ವಹಿಸಿತು.

ಕಾರ್ಯಕ್ರಮದ ಅವಧಿಯಲ್ಲಿ ಸುಮಾರು 40ಕ್ಕೂ ಹೆಚ್ಚು ತೀವ್ರ ನಿಗಾ ಪರಿಚರಣ ಅಗತ್ಯವಿದ್ದ ರೋಗಿಗಳನ್ನು AIKMCC ಆಂಬುಲೆನ್ಸ್ ಮೂಲಕ ಆಸ್ಟರ್ ಮಿಮ್ಸ್ ಹಾಗೂ ಸಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಸುರಕ್ಷಿತವಾಗಿ ತಲುಪಿಸುವ ಮಹತ್ವದ ಸೇವೆಯನ್ನು ತಂಡ ಕೈಗೊಂಡಿತು. ಫೆಬ್ರವರಿ 4ರಂದು ಆರಂಭವಾದ ಸಮಸ್ತ ಶತಾಬ್ದಿ ಕಾರ್ಯಕ್ರಮದ ಸ್ಥಳದಲ್ಲೇ ಸಮಸ್ತ ಅಧೀನದಲ್ಲಿ 24 ಗಂಟೆಗಳ ವೈದ್ಯಕೀಯ ಸೇವೆ ಒದಗಿಸಲಾಗಿತ್ತು.

SKSSF MEEM ವತಿಯಿಂದ ಸುಮಾರು 30ಕ್ಕೂ ಹೆಚ್ಚು ವೈದ್ಯರು, 20ಕ್ಕೂ ಹೆಚ್ಚು ನರ್ಸಿಂಗ್ ಸಿಬ್ಬಂದಿ, ಅಧಿಕೃತ ಸಿಬ್ಬಂದಿ ಹಾಗೂ 30ಕ್ಕೂ ಹೆಚ್ಚು ಆಂಬುಲೆನ್ಸ್ ವಾಹನಗಳು ನಿರಂತರ ಉಚಿತ ಸೇವೆಯಲ್ಲಿ ತೊಡಗಿಸಿಕೊಂಡಿದ್ದವು. ಜೊತೆಗೆ ಅರೆಕಾಲಿಕ ವೈದ್ಯರೂ ಸೇವೆ ಸಲ್ಲಿಸಿದರು.
AIKMCC ಮಂಗಳೂರು ಆಂಬುಲೆನ್ಸ್ ಸೇವೆಯಲ್ಲಿ AIKMCC ಮಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ವಿಕಾಯ ಆಕ್ಟಿವ್ ವಿಂಗ್ ಸದಸ್ಯರಾದ ಸಯ್ಯದ್ ಆಫ್ಹಮ್ ತಂಗಳ್, AIKMCC ಸುಳ್ಯ ಅಧ್ಯಕ್ಷರು ಹಾಗೂ ವಿಕಾಯ ಆಕ್ಟಿವ್ ವಿಂಗ್ ಸದಸ್ಯರಾದ ಖಲಂದರ್ ಎಲಿಮೆಲೆ, ಆಂಬುಲೆನ್ಸ್ ಚಾಲಕರಾದ ಜಬ್ಬಾರ್ KMCC ಹಾಗೂ ವಿಕಾಯ ಆಕ್ಟಿವ್ ವಿಂಗ್ ಸದಸ್ಯರಾದ ತಾಜುದ್ದೀನ್ ತರ್ಲಿ ಮತ್ತು ಮುಹಿಯುದ್ದೀನ್ ಸೇವೆಯಲ್ಲಿ ಭಾಗವಹಿಸಿದರು.

ಇದಲ್ಲದೆ Aziz ಬಪ್ಪಳಿಗೆ (AIKMCC ಪುತ್ತೂರು ಖಜಾಂಚಿ), ಹನೀಫ್ ಮುಕ್ವೆ (AIKMCC ಪುತ್ತೂರು ಕಾರ್ಯನಿರ್ವಹಣಾ ಅಧ್ಯಕ್ಷರು), ಹನೀಫ್ ನಂದಿನಿ (AIKMCC ಪುತ್ತೂರು ಟ್ರಾಮಾ ಬ್ಲಡ್ ಕೇರ್), ಖಲಂದರ್ (AIKMCC ಪುತ್ತೂರು ಮೀಡಿಯಾ ವಿಂಗ್), ಶೇಖ್ ನಿಜಾಮುದ್ದೀನ್ ಸೇರಿದಂತೆ ಹಲವಾರು ಸದಸ್ಯರು ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಈ ಸೇವೆಯಲ್ಲಿ ಭಾಗವಹಿಸಿದ ಎಲ್ಲರಿಗೂ AIKMCC ಮಂಗಳೂರು ಡಿ.ಕೆ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಗಿದೆ.

Leave a Reply

Your email address will not be published. Required fields are marked *