ಸೋಮವಾರ ವಿವೇಕಾನಂದ ಜಯಂತಿ ಹಾಗೂ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ಸಂಸ್ಥೆಯಲ್ಲಿ ಸಾಮೂಹಿಕ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಜರುಗಿತು.
ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಒಟ್ಟಾಗಿ ರಾಷ್ಟ್ರಭಕ್ತಿಯ ಗೀತೆ ಹಾಗೂ ವಂದೇ ಮಾತರಂ ಗೀತೆಯನ್ನು ಏಕಕಾಲದಲ್ಲಿ ಗಾಯನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಭಾವುಕ ಸೊಬಗು ತಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಜರಾಗಿದ್ದ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಂಯೋಜಕರಾದ ಶ್ರೀ ಮೋಹನ್‌ದಾಸ್ ದೊಲ್ಪಡಿ ಮಾತನಾಡಿ,
“ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಯುವಜನತೆಗೆ ಶ್ರೇಷ್ಟ ಸ್ಪೂರ್ತಿ. ಭಾರತದ ವಿಶ್ವಗುರು ಸ್ಥಾನವನ್ನು ಪುನಃಸ್ಥಾಪಿಸುವಲ್ಲಿ ಇಂದಿನ ಮಕ್ಕಳು ವಿವೇಕಾನಂದರ ತತ್ವದಲಿ ನಡೆಯಬೇಕು. ವಂದೇ ಮಾತರಂ ಗೀತೆಯು ದೇಶವನ್ನು ಒಗ್ಗೂಡಿಸುವಲ್ಲಿ ಮಹತ್ತರ ಪಾತ್ರವಹಿಸಿದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರವಿರಾಜ್ ಶೆಟ್ಟಿ ಕಡಬ ಮಾತನಾಡಿ,
“ಪ್ರತಿ ಮಗುವಿನಲ್ಲಿಯೂ ವಿವೇಕಾನಂದರ ಶಕ್ತಿ, ಸ್ಪೂರ್ತಿ ಮತ್ತು ದೇಶಪ್ರೇಮ ಜಾಗೃತಿಯಾಗಬೇಕು” ಎಂಬ ಸಂದೇಶ ನೀಡಿದರು.

ಯೂತ್ ಕ್ಲಬ್ ದೊಡ್ಡಕೊಪ್ಪ ಅಧ್ಯಕ್ಷರಾದ ಶ್ರೀ ಶ್ರೀಕಾಂತ್ ಹಾಗೂ ಲಕ್ಷ್ಮೀ ಜನಾರ್ಧನ ಯುವಕ ಮಂಡಲ ಕೇಪು ಅಧ್ಯಕ್ಷರಾದ ಶ್ರೀ ಶರತ್ ಕಾರ್ಯಕ್ರಮಕ್ಕೆ ಶುಭಾಶಯಗಳನ್ನು ತಿಳಿಸಿದರು. ಆಡಳಿತ ಮಂಡಳಿಯ ನಿರ್ದೇಶಕಿ ಶ್ರೀಮತಿ ಪ್ರಮೀಳಾ ಲೋಕೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯಶಿಕ್ಷಕರಾದ ಶ್ರೀ ಮಾಧವ ಕೋಲ್ಪೆ ಸ್ವಾಗತಿಸಿ, ಸಹಶಿಕ್ಷಕಿ ಪ್ರೇಮಲತ ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಸಂಸ್ಥೆಯ ಸಹಶಿಕ್ಷಕಿಯಾದ ವಸಂತಿ ನೆರವೇರಿಸಿದರು.

Leave a Reply

Your email address will not be published. Required fields are marked *