ಬೆಂಗಳೂರು – ನಗರದ ಪ್ರಮುಖ ವಾಣಿಜ್ಯ ಸ್ಥಳವಾಗಿರುವ ಮಂತ್ರಿ ಮಾಲ್ಗೆ ಮತ್ತೆ ಬೀಗ ಜಡಿಯಲಾಗಿದೆ. ಮಲ್ಲೇಶ್ವರಂನಲ್ಲಿ ಮಂತ್ರಿ ಮಾಲ್ನವರು ಆಸ್ತಿ ತೆರಿಗೆ ಪಾವತಿಸುವಲ್ಲಿ ವಿಫಲರಾಗಿರುವುದರಿಂದ ಮಾಲ್ಗೆ ಜಿಬಿಎ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಸರಿ ಸುಮಾರು 31 ಕೋಟಿ ರೂ.ಗಳ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ತೆರಿಗೆ ಪಾವತಿಸಲು ವಿಫಲರಾಗಿರುವುದರಿಂದ ಅನಿವಾರ್ಯವಾಗಿ ಮಾಲ್ಗೆ ಬೀಗ ಜಡಿಯಬೇಕಾಯಿತು ಎಂದು ಜಿಬಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



30 ಕೋಟಿ 81ಲಕ್ಷದ 45 ಸಾವಿರದ 600 ರೂ. ಗಳ ತೆರಿಗೆ ಬಾಕಿ ಉಳಿಸಿಕೊಂಡ ಕಾರಣ ತೆರಿಗೆ ಪಾವತಿಸುವಂತೆ ಹಲವಾರು ಬಾರಿ ನೋಟೀಸ್ ಜಾರಿ ಮಾಡಿದ್ದರೂ ಮಾಲ್ನವರು ತೆರಿಗೆ ಪಾವತಿಸುವಲ್ಲಿ ವಿಫಲರಾಗಿದ್ದರು.


ಈ ಹಿಂದೆ ಕೂಡ ಹಲವಾರು ಬಾರಿ ಮಂತ್ರಿ ಮಾಲ್ಗೆ ಬೀಗ ಜಡಿಯಲಾಗಿತ್ತು. ಮೊದ ಮೊದಲು ತೆರಿಗೆ ಪಾವತಿಸುವ ಭರವಸೆ ನೀಡಿ ಸೀಜ್ನಿಂತ ತಪ್ಪಿಸಿಕೊಂಡಿದ್ದರು.ಮತ್ತೊಮೆ ಸೀಜ್ ಮಾಡಿದಾಗ ಮಾಲ್ ಮಾಲೀಕರು ನ್ಯಾಯಲಯದ ಮೊರೆ ಹೋಗಿ ಕಂತಿನ ರೂಪದಲ್ಲಿ ತೆರಿಗೆ ಪಾವರಿಸುವ ಭರವಸೆ ನೀಡಿ ಬಚಾವಾಗಿದ್ದರು.
ನ್ಯಾಯಲಯದ ಮೊರೆ ಹೋದ ನಂತರವೂ ಮಾಲ್ನವರು ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಮೊತ್ತ 31 ಕೋಟಿ ರೂ.ಗಳಿಗೆ ಏರಿಕೆಯಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಬೀಗ ಜಡಿಯಬೇಕಾದ ಪರಿಸ್ಥಿತಿ ಬಂದಿದೆ.


