ಬೆಂಗಳೂರು:
ಕಿಚ್ಚ ಸುದೀಪ್ ಅವರ ನಿರೂಪಣೆಯೊಂದಿಗೆ ನಡೆದ ಬಿಗ್ ಬಾಸ್ ಕನ್ನಡ ಸೀಸನ್–12ರ ಗ್ರ್ಯಾಂಡ್ ಫಿನಾಲೆಯಲ್ಲಿ ಗಿಲ್ಲಿ ನಟ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ. ಭರ್ಜರಿ ಮತಗಳೊಂದಿಗೆ ಟ್ರೋಫಿಯನ್ನು ಎತ್ತಿಹಿಡಿದ ಗಿಲ್ಲಿ ನಟ ಅವರು ತಮ್ಮ ಅಭಿಮಾನಿಗಳಿಗೆ ‘ದೊಡ್ಡ ಸಲ್ಯೂಟ್’ ಸಲ್ಲಿಸಿ, ಹೃದಯಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

ವಿಜಯದೊಂದಿಗೆ ಗಿಲ್ಲಿ ನಟ ಅವರಿಗೆ ರೂ.50 ಲಕ್ಷ ನಗದು ಬಹುಮಾನ ಹಾಗೂ ಹೊಸ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಲಭಿಸಿದೆ. ಇನ್ನು ಸ್ಪರ್ಧೆಯಲ್ಲಿ ರಕ್ಷಿತಾ ಶೆಟ್ಟಿ ಅವರು ಪ್ರಥಮ ರನ್ನರ್-ಅಪ್ ಆಗಿ ಹೊರಹೊಮ್ಮಿದ್ದಾರೆ.
ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಭಾವನಾತ್ಮಕ ಕ್ಷಣಗಳು, ಸಂಭ್ರಮ ಹಾಗೂ ಅಭಿಮಾನಿಗಳ ಉತ್ಸಾಹದಿಂದ ತುಂಬಿದ್ದು, ಸೀಸನ್–12 ಯಶಸ್ವಿಯಾಗಿ ಅಂತ್ಯಗೊಂಡಿದೆ.

Leave a Reply

Your email address will not be published. Required fields are marked *